ICC ಕ್ರಿಕೆಟ್ ಸಾಧಕರ ತಂಡ ಪ್ರಕಟ; ಭಾರತದ 6 ಆಟಗಾರು, ಚಾಂಪಿಯನ್ ಆಸಿಸ್‌ನಿಂದ ಕೇವಲ ಇಬ್ಬರು ಆಯ್ಕೆ

World cup Cricket 2023 - Team India

ದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ತನ್ನ ವಿಶ್ವಕಪ್ ಸಾಧಕರ ಪಟ್ಟಿಯನ್ನೊಳಗೊಂಡ ತಂಡವನ್ನು ಸೋಮವಾರ ಪ್ರಕಟಿಸಿದೆ. ಈ ತಂಡದಲ್ಲಿ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ಕ್ರಿಕೆಟ್ ತಂಡದ 6 ಮಂದಿ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಐಸಿಸಿ ವಿಶ್ವಕಪ್ ತಂಡದ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್ ಶ್ರೇಷ್ಠ ಇಯಾನ್ ಬಿಷಪ್, ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಶೇನ್ ವ್ಯಾಟ್ಸನ್ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಸೇರಿದಂತೆ ಪ್ರಮುಖರನ್ನೊಳಗೊಂಡ ಸಮಿತಿಯು ಈ ಪಟ್ಟಿಯನ್ನು ಪ್ರಕಟಿಸಿದೆ. ಐಸಿಸಿ ಪ್ರಕಟಿಸಿದ ಈ ಪಟ್ಟಿಯಲ್ಲಿ ಭಾರತದ ಆರು ಆಟಗಾರರು ಇದ್ದರೆ ಚಾಂಪಿಯನ್ ಶಿಪ್ ಗೆದ್ದ ಆಸ್ಟ್ರೇಲಿಯಾದ ಕೇವಲ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ.

ಪಟ್ಟಿ ಹೀಗಿದೆ: 

  1. ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) (ದಕ್ಷಿಣ ಆಫ್ರಿಕಾ)

  2. ರೋಹಿತ್ ಶರ್ಮಾ (ನಾಯಕ) (ಭಾರತ)

  3. ವಿರಾಟ್ ಕೊಹ್ಲಿ (ಭಾರತ)

  4. ಡೇರಿಲ್ ಮಿಚೆಲ್ (ನ್ಯೂಜಿಲೆಂಡ್)

  5. ಕೆಎಲ್ ರಾಹುಲ್ (ಭಾರತ)

  6. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ)

  7. ರವೀಂದ್ರ ಜಡೇಜಾ (ಭಾರತ)

  8. ಜಸ್ಪ್ರೀತ್ ಬುಮ್ರಾ (ಭಾರತ)

  9. ದಿಲ್ಶನ್ ಮಧುಶಂಕ (ಶ್ರೀಲಂಕಾ)

  10. ಆಡಮ್ ಝಂಪಾ (ಆಸ್ಟ್ರೇಲಿಯಾ)

  11. ಮೊಹಮ್ಮದ್ ಶಮಿ (ಭಾರತ)

  12. ಜೆರಾಲ್ಡ್ ಕೋಟ್ಜಿ (ದಕ್ಷಿಣ ಆಫ್ರಿಕಾ)