ಈತನ ಜೀವನದಲ್ಲಿ ವಿದಿಯ ಕ್ರೂರ ಆಟ

0
biggest-kid-araya

ಈತ ಹುಟ್ಟುತ್ತಾ ಮುದ್ದು ಮುದ್ದಾಗಿದ್ದ. 3.6 ಕೆಜಿ ಇದ್ದ  ಮಗು  7 ವರ್ಷದವರೆಗೆ ಇತರ ಹುಡುಗರಂತೆ ಆಟ ಪಾಟದಲ್ಲಿ ತೊಡಗಿದ್ದ ಈತನ ಜೀವನದಲ್ಲಿ ವಿದಿ ಕ್ರೂರವಾಗಿ ಆಟವಾಡಿದೆ.  ಇಂಡೋನೇಷಿಯಾದ ಸಿಪುರ್ ವಾಸರೈ ಎಂಬ ಗ್ರಾಮದ ಆರ್ಯಾ ಪರ್ಮಾನಾ ಎಂಬ ಈ ಬಾಲಕ, ಇದೀಗ 10 ದಾಟಿರುವ ಈ ಬಾಲಕನ ತೂಕ ಮಾತ್ರ ಬರೋಬ್ಬರಿ 192 ಕೆಜಿ.

ಈತ ಮೊರ್ಬಿಡ್ ಓಬೆಸಿಟಿ ಕಾಯಿಲೆಯಿಂದ ಬಳಲುತ್ತಿದ್ದು, ಈತನನ್ನು ವಿಶ್ವದ ಅತ್ಯಂತ ದೈತ್ಯಾಕಾರದ ಮಗು ಎಂದು ಗುರುತಿಸಲಾಗಿದೆ. ಅತೀ ತೂಕದಿಂದ ಬಳತ್ತಿರುವ ಈ ಬಾಲಕನಿಗೆ ನಡೆದಾಡಲು, ಮಲಗಲು ಸಾಧ್ಯವಾಗುತ್ತಿಲ್ಲ.

ಅತೀಯಾದ ಹಸಿವಿನಿಂದ ಬಳಲುವ ಈತನಿಗೆ ಎಷ್ಟು ತಿಂದರೂ ಸಾಕಾಗುವುದಿಲ್ಲವಂತೆ. ದಿನಕ್ಕೆ ಐದು ಬಾರಿ ಊಟ ಮಾಡುವ ಈತ, ಅನ್ನ, ಮೀನು,ಮಾಂಸ, ತರಕಾರಿ ಸೂಪ್ ಹಾಗೂ ಸೋಯಾಬಿನ್ ಕೇಕ್ ತಿನ್ನುತ್ತಾನಂತೆ.ಈತನ ಖಾಯಿಲೆ ಗುಣಪಡಿಸಲು ಪೋಷಕರು ಹಲವು ವೈದ್ಯರನ್ನು ಸಂಪರ್ಕಿಸಿದರೂ ಪ್ರಯೋಜನ ಮಾತ್ರ ಶೂನ್ಯ.

ದಿನೇ ದಿನೇ ಹೆಚ್ಚುತ್ತಿರುವ ಈತನ ದೇಹ ತೂಕ ಇದೀಗ ಈ ಬಾಲಕನ ಜೀವಕ್ಕೆ ಅಪಾಯ ತಂದೊಡ್ಡಿದ್ದು, ಪೋಷಕರಲ್ಲಿ ಆತಂಕ ಮನೆಮಾಡಿದೆ.

Leave a Reply

Your email address will not be published. Required fields are marked *