ಸಂಪ್ರದಾಯಕ್ಕೆ ಮುನ್ನುುಡಿ ಬರೆದ ಕಾಲೇಜು ಕನ್ಯೆಯರು; ಸೀರೆ ಉಟ್ಟು ಸಂಭ್ರಮ
ಸೀರೆ ಅನ್ನೋದು ಮಹಿಳೆಯರ ಸಾಂಪ್ರದಾಯಿಕ ಉಡುಗೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋದ, ಅದರಲ್ಲೂ ಜೀನ್ಸ್ ಫ್ಯಾಂಟ್, ಚೂಡಿದಾರ ಮೊರೆ ಹೋದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೀರೆ ಬಗ್ಗೆ ಅಷ್ಟಾಗಿ ಗೊತ್ತೇ ಇಲ್ಲ.
ಮಹಿಳೆಯರ ಸಾಂಪ್ರದಾಯಿಕ ಉಡುಗೆ ಸೀರೆಯ ಮಹತ್ವವನ್ನು ಸಾರಲು ಹಾವೇರಿಯ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಕಾಲೇಜಿನಲ್ಲಿ ಸಾರಿಡೇ ಆಚರಿಸಲಾಯಿತು. ಕಾಲೇಜು ಹುಡುಗಿಯರು ಸೀರೆ ಉಟ್ಟು ರಾಂಪ್ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸ್ಟೇಜ್ ಮೇಲೆ ಹೆಜ್ಜೆ ಹಾಕುತ್ತಿರೋ ಹುಡುಗಿಯರು.. ಬಣ್ಣ ಬಣ್ಣದ ಸೀರೆ ತೊಟ್ಟು ಹುಡುಗಿಯರ ದಂಡು.. ಸೀರೆ ಉಟ್ಟು ಬಿಂಕ ಬಿನ್ನಾಣದ ನಡಿಗೆ ಪ್ರದರ್ಶಿಸುತ್ತಿರೋ ಹುಡುಗಿಯರು ಸೀರೆ ಉಟ್ಟು ರಾಂಪ್ ಮೇಲೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಸೀರೆಯ ಮಹತ್ವ ತಿಳಿಸಿ ಕೊಡಲು ಸಾರಿ ಡೇ ಆಚರಿಸಲಾಯಿತು. ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ರಾಂಪ್ ಮೇಲೆ ಬಿಂಕು ಬಿನ್ನಾಣ ಪ್ರದರ್ಶಿಸಿದರು.
ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಸಾರಿ ಡೇಯಲ್ಲಿ ಭಾಗವಹಿಸಿದರು. ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದರಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಾರಿ ಮಹತ್ವ ತಿಳಿಸಲು ಈ ದಿನ ಮೀಸಲಿಡಲಾಗಿತ್ತು.
ವಿದ್ಯಾರ್ಥಿನಿಯರು ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಮುಂಭಾಗದಲ್ಲಿ ನೆರೆದಿದ್ದ ವಿದ್ಯಾರ್ಥಿನಿಯರ ದಂಡು ಕೇಕೇ ಮತ್ತು ಚಪ್ಪಾಳೆ ಹಾಕಿ ಖುಷಿಪಡುತ್ತಿದ್ದರು. ಕೆಲವರು ಇಳಕಲ್ ಸೀರೆ ಉಟ್ಟುಕೊಂಡು ಬಂದಿದ್ದರೆ, ಮತ್ತೆ ಕೆಲವರು ಪಾಲಿಸ್ಟರ್ ಸೀರೆ ಹೀಗೆ ವಿವಿಧ ರೀತಿಯ ಸೀರೆಗಳನ್ನು ಉಟ್ಟುಕೊಂಡು ಬರುವ ಮೂಲಕ ಸಾರಿ ಡೇಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ವಿದ್ಯಾರ್ಥಿನಿಯರು ಒಬ್ಬರಿಗಿಂತ ಒಬ್ಬರು ತರಹೇವಾರಿ ಸೀರೆಗಳನ್ನು ಉಟ್ಟು ಸಂಭ್ರಮ ಆಚರಿಸಿದರು. ಒಟ್ಟಿನಲ್ಲಿ ಸಾರಿ ಡೇ ಮೂಲಕ ವಿದ್ಯಾರ್ಥಿನಿಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ, ದೇಶಿಯತೆ ಸಾರೋ ಸೀರೆಯನ್ನುಟ್ಟು ಸಾಂಪ್ರದಾಯಿಕ ಉಡುಗೆಯನ್ನು ಉಳಿಸಬೇಕು ಅನ್ನೋದರ ಅರಿವು ಮೂಡಿಸಲಾಯಿತು….