‘ಗಜಾನನ ಕ್ರಿಕೆಟರ್ಸ್’ ಮೂವೀ ಕುತೂಹಲ: ಕ್ರಿಕೆಟ್ ಪ್ರೇಮಿಗಳ ಚಿತ್ತ ಸೆಳೆದ ಟೀಸರ್

0
Gajanana Cricketers Kannada movie

ಭಾರತದಲ್ಲಿ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕರಾವಳಿಯಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಎಂದರೆ ಒಂದು ಆರಾಧನೆ. ಅದೇ ಅಂಡರ್ ಆರ್ಮ್ ಕ್ರಿಕೆಟ್ ನ ಕಥೆ ತುಳು ಸಿನಿಮಾದಲ್ಲಿ ಬರುತ್ತಿದೆ ಎಂದರೆ ಅಭಿಮಾನಿಗಳಿಗೆ ಒಂದು ಹಬ್ಬ. ಹೌದು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಂಡರ್ ಆರ್ಮ್ ಕ್ರಿಕೆಟ್ ಕಥೆಯನ್ನು ಗಜಾನನ ಕ್ರಿಕೆಟರ್ಸ್ ಸಿನಿಮಾದ ಮೂಲಕ ತೆರೆದಿಡಲಾಗಿದೆ. ಕ್ರಿಕೆಟ್ ಕುರಿತ ಸಿನಿಮಾ ‘ಗಜಾನನ ಕ್ರಿಕೆಟರ್ಸ್’ ಟೀಸರ್ ಬಿಡುಗಡೆಯಾಗಿದ್ದು ಕ್ರಿಕೆಟ್ ಪ್ರೇಮಿಗಳ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು ಚಿತ್ರ ಪ್ರೇಮಿಗಳ ಕುತೂಹಲ ಕೆರಳುವಂತೆ ಮಾಡಿದೆ. ಈ ಚಿತ್ರದ ತಾರಾಗಣದಲ್ಲಿ ವಿನೀತ್ ಕುಮಾರ್, ಅನ್ವಿತಾ ಸಾಗರ್, ಸಮತಾ ಅಮೀನ್, ಪ್ರಜ್ವಲ್ ಶೆಟ್ಟಿ, ನವೀನ್ ಡಿ ಪಡಿಲ್, ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ವಾಳ್ತಾರ್ ನಂದಳಿಕೆ, ಸಚಿನ್ ಮಾಡ ಸೇರಿದಂತೆ ಕರಾವಳಿಯ ಹಾಲವಾರು ಹೆಸರಾಂತ ಕಲಾವಿದರು ನಟಿಸಿದ್ದಾರೆ. ಇದರಿಂದ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಆದಷ್ಟು ಬೇಗ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಈ ಚಿತ್ರ ಪ್ರಜ್ವಲ್ ಫಿಲಂಸ್ ಬ್ಯಾನರ್ ನಲ್ಲಿ ತಯಾರಾಗಿದ್ದು ಪ್ರಜ್ವಲ್ ಶೆಟ್ಟಿ ಇವರು ನಿರ್ಮಾಣ ಮಾಡಿ ರೋಹನ್ ವಾಮಂಜೂರ್ ಹಾಗೂ ಸಂತೋಷ್ ಲಾಡ್ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಕೀರ್ತನ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದು ಮಿನುತ್ ಕೆ ಸುವರ್ಣ ಛಾಯಾಗ್ರಹಣ, ಸೃಜನ್ ಕುಮಾರ್ ಸಂಗೀತ, ಸುಜಯ್ ಶಿವರಾಮ್, ಕೌಶಿಕ್ ಭಂಡಾರಿ ಸಂಕಲನ ಈ ಸಿನಿಮಾಕ್ಕೆ ಇದೆ. ಈ ಸಿನಿಮಾ ವಿಭಿನ್ನವಾಗಿ ಮೂಡಿ ಬಂದಿದ್ದು ಟೀಸರ್’ಗೆ ಸಿನಿಪ್ರಿಯರು ಹಾಗೂ ಕ್ರಿಕೆಟ್ ಪ್ರೇಮಿಗಗಳಿಂದ ಸಕತ್ ಲೈಕ್ಸ್ ಸಿಕ್ಕಿದೆ.

Leave a Reply

Your email address will not be published. Required fields are marked *

You may have missed