ಮುಖಕಾಂತಿ ಹೆಚ್ಚಿಸುವ ಸುಲಭೋಪಾಯ- ಇಲ್ಲಿದೆ ರಹಸ್ಯ
ಜೀವನ ಶೈಲಿಯಲ್ಲಿ ಸೂರ್ಯನ ಬೆಳಕಿಗೆ ಮುಖವೊಡ್ಡುವುದು ಅನಿವಾರ್ಯ. ಅಷ್ಟೇ ಅಲ್ಲದೆ ಪರಿಸರ ಮಾಲಿನ್ಯಗಳು ಚರ್ಮವನ್ನು ಹಾನಿಗೀಡು ಮಾಡುತ್ತದೆ.ಸೌಂದರ್ಯ ವೃದ್ದಿಗಾಗಿ ಮಹಿಳೆಯರು ಸ್ಪಾ, ಬ್ಯೂಟಿ ಪಾರ್ಲರ್ ಗೆ ತೆರಳಿ ಸಾವಿರಾರು ರೂಪಾಯಿಗಳನ್ನು ವ್ಯಯಿಸುವುದನ್ನು ನೋಡುತ್ತೆವೆ. ಆದರೆ ರಸಾಯನಿಕಗಳನ್ನು ಬಳಸುವುದರಿಂದ ಕೇವಲ ಕ್ಷಣಿಕ ಸೌಂದರ್ಯ ಸಿಗುವುದೇ ಹೊರತು, ಶಾಶ್ವತ ಪರಿಹಾರ ಅಸಾಧ್ಯ. ಅದರಲ್ಲೂ ಚರ್ಮದಲ್ಲಿ ಹೆಚ್ಚುಹೆಚ್ಚು ಉತ್ಪತ್ತಿಯಾಗುವ ಡೆಡ್ ಸ್ಕಿನ್ ಗಳು ಸೌಂದರ್ಯಕ್ಕೆ ಮಾರಕ ಎಂದೇ ಹೇಳಬಹುದು.ಇದರ ಪರಿಹಾರಕ್ಕೆ ಸುಲಭ ಹಾಗೂ ಪರಿಣಾಮಕಾರಿ ಮನೆಮದ್ದು ಇಲ್ಲಿದೆ ನೋಡಿ.
ಕಡ್ಲೆಪುಡಿ 1 ಚಮಚ,
ಚಿಟಿಕೆ ಅರಿಶಿನ ಪುಡಿ,
ಸ್ಪಲ್ಪ ಹಾಲು, ಮತ್ತು
ಬಾದಮಿ ಎಣ್ಣೆ.
ಇವುಗಳ ಮಿಶ್ರಣ ತಯಾರಿಸಿ ಮುಖಕ್ಕೆ ಹಚ್ಚಿ, 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೆ ಒಂದು ಬಾರಿ ಹೀಗೆ ಮಾಡುವುದರಿಂದ ಡೆಡ್ ಸ್ಕೀನ್ ಸಮಸ್ಯೆಯಿಂದ ಮುಕ್ತ ಹೊಂದಬಹುದು ಹಾಗೂ ಹೊಳೆಯುವ ತ್ವಜೆ ಪಡೆಯಬಹುದು…