ಟ್ರಾಕ್ಟರ್ ಡಿಕ್ಕಿ: ಮೊಮ್ಮಗ ಸಾವು, ಅಜ್ಜಿಗೆ ಗಾಯ

ಬೆಂಗಳೂರು: ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್‌ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಟ್ರ್ಯಾಕ್ಟರ್ ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿದ್ದಾನೆ.

ದರ್ಜಿಪೇಟೆ ನಿವಾಸಿ ಹರೀಶ್ ಸಿಂಗ್, ದೀಪಿಕಾಬಾಯಿ ಪುತ್ರ ದರ್ಶನ್ (03) ಮೃತ ಬಾಲಕ.
ಬುಧವಾರ ಬೆಳಿಗ್ಗೆ ತನ್ನ ಅಜ್ಜಿ ಕಮಲೇಶ್ ದೇವಿ ಜತೆಗೆ ರಸ್ತೆ ದಾಟಲು ನಿಂತಿದ್ದ ವೇಳೆ ಟ್ರ್ಯಾಕ್ಟ‌ರ್ ಡಿಕ್ಕಿಯಾಗಿದೆ. ಈ ವೇಳೆ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ವೃದ್ಧೆ ಕಮಲೇಶ್ ದೇವಿಗೂ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may have missed