ಎರಡು ವರ್ಷದ ಹೆಣ್ಣು ಮಗುವಿನ ಶವ ಪತ್ತೆ.. ಪಾಪಿಗಳ ಕೃತ್ಯಕ್ಕೆ ಸ್ಥಳೀಯರ ಆಕ್ರೋಶ

Doddaballapur- The body of a girl child was found.

ಬೆಂಗಳೂರು (ಗ್ರಾ): ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣದ ಚರಂಡಿಯಲ್ಲಿ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ, ಮಗುವಿನ ಕೆಳಗಡೆ ಸೀರೆ ಹಾಕಿದ್ದು, ಮಗುವಿಗೆ ಸ್ವೇಟರ್ ಹಾಕಲಾಗಿತ್ತು. ಮಗು ಸತ್ತ ನಂತರ ಶವವನ್ನ ಚರಂಡಿಯಲ್ಲಿ ಮಲಗಿಸಿ ಹೋಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ

ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳಲ್ಲಿ ಸಾಕಷ್ಟು ಮಂದಿ ಉತ್ತರ ಭಾರತೀಯರು ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ, ಸತ್ತಿರುವ ಮಗು ಉತ್ತರ ಭಾರತೀಯರ ಕುಟುಂಬಕ್ಕೆ ಸೇರಿರಬಹುದು, ಯಾವುದೋ ಕಾರಣಕ್ಕೆ ಮಗು ಸತ್ತಿರಬಹುದು, ಅಥವಾ ಮಗುವನ್ನ ಕೊಂದಿರಲು ಬಹುದು ಎನ್ನಲಾಗುತ್ತಿದೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.