ಸಹ ಆಟಗಾರನ ಪೃಷ್ಟ ಹಿಸುಕಿ ನಗೆಪಾಟಲಿಗೀಡಾದ ಆಸೀಸ್ ಆಟಗಾರ ಉಸ್ಮಾನ್ ಖ್ವಾಜಾ

0
cricket

ವೆಲ್ಲಿಂಗ್ಟನ್‌: ಆಸ್ಟ್ರೇಲಿಯಾ ಆಟಗಾರರೇ ಹಾಗೆ. ಸಮಯ ಸಿಕ್ಕಲೇಲ್ಲ ಏನಾದರೂ ಒಂದು ಕೀಟಲೆ ಮಾಡುತ್ತಲ್ಲೇ ಇರುತ್ತಾರೆ. ಮೈದಾನದಲ್ಲಿ ಎದುರಾಳಿಗಳನ್ನು ಕೆಣುಕುವುದು, ಕಪಿಚೇಷ್ಠೆ ಮಾಡುವುದು ಹೀಗೆ ಏನಾದರು ಒಂದು ಮಾಡುತ್ತಲೇ ಇರುತ್ತಾರೆ. ಇದೀಗ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಬೇರೆ ರೀತಿಯಿಂದ ಕ್ರಿಕೆಟ್ ಪ್ರೇಮಿಗಳ ಮತ್ತು ಕ್ರಿಕೆಟ್ ಆಟಗಾರರ ಎದುರು ನಗೆಪಾಟಲಿಗೀಡಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನಾ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಆಸೀಸ್ ಆಟಗಾರರು ಒಬ್ಬರಿಗೊಬ್ಬರು ಸೊಂಚಕ್ಕೆ ಕೈ ಹಾಕಿಕೊಂಡು ನಿಲ್ಲುವುದು ಸಾಮಾನ್ಯ. ಆದರೆ, ಇದನ್ನೇ ದುರುಪಯೋಗ ಪಡಿಸಿಕೊಂಡ ಉಸ್ಮಾನ್ ಖ್ವಾಜ್, ಸಹ ಆಟಗಾರನ ಆ್ಯಡಂ ಜಂಪಾ ಪೃಷ್ಟ ಹಿಸುಕಿದ್ದಾನೆ. ಈ ದೃಶ್ಯ ವೈರಲ್ ಆಗಿದ್ದು, ಇದೀಗ ಭಾರೀ ಸುದ್ದಿ ಮಾಡುತ್ತಿದೆ. ಈ ರೀತಿ ಮಾಡುತ್ತಿರುವ ಸಂದರ್ಭದಲ್ಲೇ ಪ್ರೇಕ್ಷಕರು ನೋಡಿ ಕೇಕೇ ಹಾಕಿದ್ದಾರೆ. ಖ್ವಾಜಾನ ಈ ವರ್ತನೆ ನಗೆಪಾಟಲಿಗೀಡಾಗಿದಷ್ಟೆ ಅಲ್ಲದೇ, ಕೆಲವರ ಟೀಕೆಗೂ ಗುರಿಯಾಗಿದೆ.

ಬಳಿಕ ಸ್ಪಷ್ಟನೆ ನೀಡಿರುವ ಉಸ್ಮಾನ್ ಖ್ವಾಜಾ, ಆ್ಯಡಂ ಜಂಪಾ ಹೊಸ ಹುಡುಗ. ಆತನ ಏಕಾಗ್ರತೆಯನ್ನು ಪರೀಕ್ಷಿಸಲು ಹಾಗೆ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾನೆ. ಆದರೆ, ಜನರು ಮಾತ್ರ ಖ್ವಾಜಾನ ವರ್ತನಗೆ ಬೇರೇ ಅರ್ಥವನ್ನು ಕಲ್ಪಿಸುತ್ತಿದ್ದಾರಂತೆ.

Leave a Reply

Your email address will not be published. Required fields are marked *

You may have missed