ಕೊನೆ ಏಕದಿನ ಪಂದ್ಯ; ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ 6 ವಿಕೆಟ್ ಗಳ ಜಯ

India's Rohit Sharma raises his bat after reaching 100 runs during the one-day international cricket match between India and Australia in Perth on January 12, 2016. AFP PHOTO / Greg WOOD --IMAGE RESTRICTED TO EDITORIAL USE NO COMMERCIAL USE-- / AFP / GREG WOOD
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಮಾನ ಉಳಿಸಿಕೊಂಡಿದೆ.
ಕರ್ನಾಟಕದ ಸ್ಫೋಟಕ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಸಿಡಿಸಿದ ಅಬ್ಬರದ ಶತಕದಿಂದಾಗಿ ಟೀಮ್ ಇಂಡಿಯಾ ಸಿಡ್ನಿಯಲ್ಲಿ ನಡೆದ ಕೊನೆಯ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಜಯಿಸುವ ಮೂಲಕ ದೊಡ್ಡ ನಿಟ್ಟುಸಿರು ಬಿಟ್ಟಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ ತಂಡ 330 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕತು.
ಆಸ್ಟ್ರೇಲಿಯಾ ನೀಡಿದ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಕಾಂಗರೂಗಳ ದಾಳಿಯನ್ನು ಚೆಂಡಾಡಿದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ 123 ರನ್ ಗಳ ಮೊದಲ ಜೊತೆಯಾಟ ಆಡಿದರು. 56 ಎಸೆತಗಳನ್ನು ಎದುರಿಸಿದ ಶಿಖರ್ ಧವನ್, ಮೂರು ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ 78 ರನ್ ಸಿಡಿಸಿದರು.
ನಂತರ ಅಬ್ಬರ ಆಟಕ್ಕೆ ಇಳಿದ ರೋಹಿತ್ ಶರ್ಮ 108 ಎಸೆತಗಳಲ್ಲಿ ಒಂದು ಸಿಕ್ಸರ್, 9 ಬೌಂಡರಿ ನೆರವಿನಿಂದ 99 ರನ್ ಸಿಡಿಸಿ ಶತಕ ವಂಚಿತರಾದರು. ಇದಾದ ನಂತರ ಧೋನಿ ಅವರನ್ನು ಕೂಡಿಕೊಂಡ ಕರ್ನಾಟಕದ ಸ್ಫೋಟಕ ಬ್ಯಾಟ್ಸ್ ಮನ್ ಮನೀಶ್ ಪಾಂಡೆ, ಆಸ್ಟ್ರೇಲಿಯಾ ಬೌಲರ್ ಗಳ ಬೆವರಿಳಿಸಿದರು.
ಪಾಂಡೆ, 8 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ ಅಜೇಯ 104 ರನ್ ಸಿಡಿಸಿ, ತಂಡದ ಗೆಲುವಿಗೆ ಕಾರಣರಾದರು. ಚೊಚ್ಚಲ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ಮನೀಶ್ ಪಾಂಡೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಆದರೆ ಐದು ಪಂದ್ಯಗಳ ಈ ಸರಣಿಯನ್ನು ಆಸ್ಟ್ರೇಲಿಯಾ ತಂಡ 4-1ರಿಂದ ತನ್ನದಾಗಿಸಿಕೊಂಡಿತು.