ಮೋದಿಯನ್ನು ಬೆಂಬಲಿಸಿದ್ದಕ್ಕೆ ಆಕ್ಷೇಪ.. ಎಐಸಿಸಿ ನಾಯಕನ ಪುತ್ರನಿಂದ ಕಾಂಗ್ರೆಸ್‌ಗೆ ಗುಡ್ ಬೈ
ತಿರುವನಂತಪುರಂ: ಕಾಂಗ್ರೆಸ್ ಪಾಳಯ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಪ್ರಧಾನಿ ಪ್ರಧಾನಿ ಮೋದಿಯವರನ್ನು ಕೆಣಕಿರುವ ವಿದೇಶಿ ಮಾಧ್ಯಮ ಬಗ್ಗೆ ಕಿಡಿಕಾರಿದ್ದ ಕಾಂಗ್ರೆಸ್ ನಾಯಕ ಇದೀಗ ತಮ್ಮ ಪಕ್ಷಕ್ಕೆ ಗುಡ್ ಬೈ ಹೇಳುವಂತಾಗಿದೆ.
ಎಐಸಿಸಿ ಪ್ರಭಾವಿ ನಾಯಕ ಎ.ಕೆ.ಆ್ಯಂಟೋನಿ ಪುತ್ರ ಅನಿಲ್ ಕೆ.ಆಂಟೋನಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಕುರಿತಂತೆ ಬಿಬಿಸಿ ಪ್ರಸಾರದ ಡಾಕ್ಯುಮೆಂಟರಿ ಬಗ್ಗೆ ಅನಿಲ್ ಕೆ ಆ್ಯಂಟೊನಿ ಅವರು ಟ್ವೀಟ್ ಮಾಡಿ ಟೀಕಿಸಿದ್ದರು. ಈ ಟ್ವೀಟ್ ವಿದೇಶಿ ಮಾಧ್ಯಮದ ನಡೆಯನ್ನು ಆಕ್ಷೇಪಿಸಿದಂತಿತ್ತು. ಈ ಟ್ವೀಟ್‌ನ್ನು ಅಳಿಸಿಹಾಕಬೇಕೇಂದು ಕಾಂಗ್ರೆಸ್ ಬೆಂಬಲಿಗರು ಒತ್ತಾಯಿಸುತ್ತಿದ್ದರು. ಈ ಬಗ್ಗೆ ಬೇಸರಗೊಂಡಿರುವ ಅವರು, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸುತ್ತಿದ್ದರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
I have resigned from my roles in @incindia @INCKerala.Intolerant calls to retract a tweet,by those fighting for free speech.I refused. @facebook wall of hate/abuses by ones supporting a trek to promote love! Hypocrisy thy name is! Life goes on. Redacted resignation letter below. pic.twitter.com/0i8QpNIoXW
— Anil K Antony (Modiyude Kudumbam) (@anilkantony) January 25, 2023
ಈ ನಡುವೆ, ಕಾಂಗ್ರೆಸ್ ಕಾರ್ಯಕರ್ತರ ಒತ್ತಡ ತಂತ್ರದಿಂದ ಬೇಸತ್ತಿರುವ ಅನಿಲ್ ಕೆ ಆ್ಯಂಟೊನಿ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ರಾಜೀನಾಮೆ ಪತ್ರವನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿ ತಮಗಾಗಿರುವ ಅಸಮಾಧಾನವನ್ನು ಅವರು ಫಾಲೋವರ್ ಜೊತೆ ಹಂಚಿಕೊಂಡಿದ್ದಾರೆ.