ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಡಬಲ್ ಧಮಾಕಾ

ನವದೆಹಲಿ: ಚೊಚ್ಚಲ ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿವೆ. ಫೈನಲ್‌ನಲ್ಲಿ ಪುರುಷರ ತಂಡ ಶ್ರೀಲಂಕಾವನ್ನು 54-20 ಅಂಕಗಳಿಂದ ಮಣಿಸಿದರೆ, ಮಹಿಳಾ ತಂಡ ಉಗಾಂಡಾ ವಿರುದ್ಧ 35-15 ಅಂಕಗಳ ಜಯ ದಾಖಲಿಸಿತು.
ಒಂಬತ್ತು ದಿನಗಳ ಟೂರ್ನಿಯಲ್ಲಿ ಎರಡೂ ತಂಡಗಳು ಅಜೇಯವಾಗಿ ಪ್ರಶಸ್ತಿ ಗೆದ್ದಿವೆ. ಪುರುಷರ ಫೈನಲ್‌ನಲ್ಲಿ ಆದಿತ್ಯ ಶಿಂಧೆ ಸೂಪರ್ 10 ಸಾಧನೆ ಮಾಡಿದರೆ, ಭಾರತ್ ಹೂಡಾ ಎಂಟು ರೈಡ್ ಪಾಯಿಂಟ್ ಗಳಿಸಿದರು. ಯೋಗೇಶ್ ದಹಿಯಾ ಹೈ-5 ಸಾಧನೆ ಮಾಡಿದರು.

ಭಾರತ 30 ರೈಡ್ ಹಾಗೂ 14 ಟ್ಯಾಕಲ್ ಪಾಯಿಂಟ್ ಗಳಿಸಿ, ಶ್ರೀಲಂಕಾ ತಂಡವನ್ನು ನಾಲ್ಕು ಬಾರಿ ಆಲೌಟ್ ಮಾಡಿತು. ಟೂರ್ನಿಯಲ್ಲಿ ಆಡಿದ ಎಲ್ಲ ಎಂಟು ಪಂದ್ಯಗಳಲ್ಲೂ ಗೆದ್ದ ಭಾರತ, ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 56-27 ಅಂಕಗಳಿಂದ ಸೋಲಿಸಿತ್ತು.
ಟೂರ್ನಿಯುದ್ದಕ್ಕೂ ಭಾರತ ಒಟ್ಟು 380 ಅಂಕ ಗಳಿಸಿ, ಎದುರಾಳಿಗಳಿಗೆ ಕೇವಲ 193 ಅಂಕಗಳನ್ನು ಬಿಟ್ಟುಕೊಟ್ಟಿತು. ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಭಾರತ ತಂಡಗಳ ಪ್ರಾಬಲ್ಯ ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
