ಛತ್ತೀಸ್‌ಗಡ ಎಲೆಕ್ಷನ್ : ಹಾವು ಏಣಿಯಾಟದಲ್ಲಿ ‘ಕೈ’ ಎದುರು ಮೇಲುಗೈ ಸಾಧಿಸಿದ್ದು ಬಿಜೆಪಿ

bjp- congress Flag

ದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ಪಂಚ ರಾಜ್ಯಗಳ ಮಿನಿ ಮಹಾಸಮರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ತೋರಿಸಿದೆ. ಮಧ್ಯಪ್ರದೇಶ, ರಾಜಸ್ಥಾನದ ರೀತಿಯಲ್ಲೇ ಛತ್ತೀಸ್‌ಗಡ ರಾಜ್ಯದಲ್ಲೂ ಕಮಲ ಪಕ್ಷ ಪ್ರಾಬಲ್ಯ ಮೆರೆದಿದೆ.

ಮತ ಎಣಿಕೆಯುದ್ದಕ್ಕೂ ಕಾಂಗ್ರೆಸ್-ಬಿಜೆಪಿ ನಡುವೆ ಹಾವು ಏಣಿಯಾಟ ಮಾದರಿಯಲ್ಲೇ ಕಾಂಗ್ರೆಸ್-ಬಿಜೆಪಿ ನಡುವೆ ಬಲಾಬಲ ವ್ಯಕ್ತವಾಗುತ್ತಿತ್ತು. 90 ಸದಸ್ಯ ಬಲದ ಛತ್ತೀಸ್‌ಗಡದಲ್ಲಿ ಒಂದೊಮ್ಮೆ ಕಾಂಗ್ರೆಸ್ ಪಕ್ಷ ಬಹುಮತ ಗಾಳಿಸುವಷ್ಟು ಸ್ಥಾನಗಳಲ್ಲಿ ಮುಂದೆ ಇದ್ದರೆ, ಮತ್ತೊಂದು ಸುತ್ತಿನಲ್ಲಿ ಬಿಜೆಪಿ ಪಕ್ಷವು ಬಹುಮತ ಸಾಧಿಸುವಷ್ಟು ಮುನ್ನಡೆ ಸಾಧಿಸಿತು. ಹೀಗೆ ಮತಎಣಿಕೆಯುದ್ದಕ್ಕೂ ಕುತೂಹಲಕಾರಿ ಬೆಳವಣಿಗೆ ಸಾಗುತ್ತಾ ಹೋಯಿತು.

90 ಸದಸ್ಯಬಲದ ಛತ್ತೀಸ್‌ಗಡ ವಿಧಾನಸಭೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಛತ್ತೀಸ್‌ಗಡ ವಿಧಾನಸಭೆಯಲ್ಲಿ 46 ಸ್ಥಾನಗಳನ್ನು ಗೆದ್ದ ಪಕ್ಷ ಸರ್ಕಾರ ರಚನೆ ಮಾಡಬಹುದಾಗಿದ್ದು, ಬಿಜೆಪಿ ಅದಕ್ಕಿಂತಲೂ ಹೆಚ್ಚಿನ ಬಹುಮತದೊಂದಿಗೆ ಜಯಭೇರಿ ಭಾರಿಸಿದೆ.

  • ಅಂತಿಮ ಫಲಿತಾಂಶ ಹೀಗಿದೆ.

  • ಒಟ್ಟು ಸ್ಥಾನಗಳು: 90 

  • ಮ್ಯಾಜಿಕ್ ನಂಬರ್: 46

  • ಬಿಜೆಪಿ – 54

  • ಕಾಂಗ್ರೆಸ್ – 35

  • ಇತರರು -01

You may have missed