ನವೆಂಬರ್ 7ರಂದು ಒಂದು ಲಕ್ಷ ದೀಪಗಳಿಂದ ಕಂಗೊಳಿಸಲಿರುವ ಅಯೋಧ್ಯೆ ರಾಮ ಮಂದಿರ

0
karavali-college-deepavali

ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಸಂಕೀರ್ಣವು ನವೆಂಬರ್ 7ರಂದು ಸುಮಾರು ಒಂದು ಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಲಿದೆ. ದೀಪಾಲಂಕಾರ ಕಾರ್ಯಕ್ರಮದಲ್ಲಿ ಸುಮಾರು 1,000 ಸ್ವಯಂಸೇವಕರು ಭಾಗವಹಿಸಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಕಾರ್ಯಕ್ರಮದ ಸಿದ್ಧತೆ ಹಾಗೂ ನಿರ್ವಹಣೆಗೆ ಅನುಕೂಲವಾಗುವಂತೆ ಇಡೀ ಮಂದಿರ ಸಂಕೀರ್ಣವನ್ನು ಐದು ವಲಯಗಳಾಗಿ ವಿಂಗಡಿಸಲಾಗಿದೆ.

ಶ್ರೀ ರಾಮಲಲ್ಲಾ ಮಂದಿರದಲ್ಲಿ 30 ಸಾವಿರಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುತ್ತದೆ. ಕುಬೇರ ಟಿಲಾ ಮತ್ತು ಸಪ್ತಮಂಟಪದಲ್ಲಿ ಮತ್ತಷ್ಟು 30 ಸಾವಿರಕ್ಕೂ ಹೆಚ್ಚು ದೀಪಗಳನ್ನು ಇರಿಸಲಾಗುತ್ತದೆ.

ದರ್ಶನದ ಬಳಿಕ ಹಿಂದಿರುಗುವ ಮಾರ್ಗ ಹಾಗೂ ಯಾತ್ರಿ ಸೌಲಭ್ಯ ಕೇಂದ್ರದಲ್ಲಿ 14 ಸಾವಿರಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುತ್ತದೆ. ಯಾತ್ರಿ ಸೇವಾ ಕೇಂದ್ರ ಮತ್ತು ಅಂಗದ ಟಿಲಾದಲ್ಲಿ 13 ಸಾವಿರಕ್ಕೂ ಹೆಚ್ಚು ದೀಪಗಳ ವ್ಯವಸ್ಥೆ ಮಾಡಲಾಗಿದೆ.

ಇನ್ನು ಐದನೇ ವಲಯದ ವ್ಯಾಪ್ತಿಗೆ ಬರುವ ಶ್ರೀ ರಾಮ ಜನ್ಮಭೂಮಿ ಪಥ ಮತ್ತು ದರ್ಶನ ಮಾರ್ಗದಲ್ಲಿ ಸುಮಾರು 13 ಸಾವಿರ ದೀಪಗಳನ್ನು ಬೆಳಗಿಸಲಾಗುತ್ತದೆ. ಐದು ವಲಯಗಳಲ್ಲಿನ ವ್ಯವಸ್ಥೆಗಳ ನಿರ್ವಹಣೆಗೆ ಸ್ವಯಂಸೇವಕರು ನೆರವಾಗಲಿದ್ದಾರೆ ಎಂದು ಮಂದಿರ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *