ಬಿಡದಿ ಟೌನ್‌ಶಿಪ್ ವಿವಾದ; ಅನ್ನದಾತರ ಮೇಲೆ ಸುಳ್ಳು FIR ದಾಖಲಿಸಿ ಬೆದರಿಕೆ?

0
RAshok_-750x442-1-300x177-1

ಬೆಂಗಳೂರು: ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಜಮೀನಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಪ್ರಶ್ನಿಸಿದ ಅನ್ನದಾತರ ಮೇಲೆಯೇ ಸುಳ್ಳು FIR ದಾಖಲಿಸಿ ಬೆದರಿಕೆ ಹಾಕಲಾಗಿದೆ ಆರೋಪಿಸಿದ್ದಾರೆ.

ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಜಮೀನಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ನಿಜ ಮುಖ ಮತ್ತೊಮ್ಮೆ ಬಯಲಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

ರೈತರಿಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಜಮೀನಿಗೆ ನುಗ್ಗಿ ಜಂಟಿ ಮಾಪನ (JMC) ನಡೆಸಲು ಮುಂದಾಗಿರುವುದು ಮಾತ್ರವಲ್ಲ, ಅದನ್ನು ಪ್ರಶ್ನಿಸಿದ ಅನ್ನದಾತರ ಮೇಲೆಯೇ ಸುಳ್ಳು FIR ದಾಖಲಿಸಿ ಬೆದರಿಕೆ ಹಾಕಲಾಗಿದೆ. ರೈತರ ಪರವಾಗಿ ನಿಲ್ಲಬೇಕಾದ ಸರ್ಕಾರವೇ ಪೊಲೀಸರನ್ನು ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕಲು ಹೊರಟಿರುವುದು ಅತ್ಯಂತ ಖಂಡನೀಯ ಎಂದವರು ಹೇಳಿದ್ದಾರೆ.

ಅನ್ನದಾತರ ವಿರುದ್ಧ ಸೇಡಿನ ರಾಜಕಾರಣ ಮಾಡುವುದನ್ನು ತಕ್ಷಣ ನಿಲ್ಲಿಸಿ. 48 ಗಂಟೆಗಳ ಒಳಗೆ ರೈತರ ಮೇಲಿನ ಎಲ್ಲಾ ಸುಳ್ಳು FIRಗಳನ್ನು ಹಿಂಪಡೆಯಬೇಕು ಎಂದು ಅಶೋಕ್ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಇಲ್ಲದಿದ್ದರೆ ಬಿಜೆಪಿ ರೈತರೊಂದಿಗೆ ಬೀದಿಗಿಳಿದು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ, ದಬ್ಬಾಳಿಕೆಯ ರಾಜಕಾರಣಕ್ಕೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಅಶೋಕ್ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *