AI ದುರ್ಬಳಕೆ, ಡೀಪ್‌ಫೇಕ್ ತಡೆಗೆ ಕಠಿಣ ಕ್ರಮಕ್ಕೆ ಚಿರಂಜೀವಿ ಮನವಿ

0
Chiranjeevi

ಹೈದರಾಬಾದ್: ಕೃತಕ ಬುದ್ಧಿಮತ್ತೆ (AI) ದುರ್ಬಳಕೆ, ಡೀಪ್‌ಫೇಕ್ ಮತ್ತು ಡಿಜಿಟಲ್ ಗುರುತು ಸೋಗು ಹಾಕುವಿಕೆಯನ್ನು ತಡೆಯಲು ಬಲವಾದ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವಂತೆ ನಟ ಚಿರಂಜೀವಿ ಕೊನಿಡೇಲಾ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಇತ್ತೀಚಿನ ಭೇಟಿಯ ಬಳಿಕ, ಅವರ ಸಲಹೆಯಂತೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ಚಿರಂಜೀವಿ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಉದ್ದೇಶಿಸಿ ಈ ಮನವಿ ಸಲ್ಲಿಸಲಾಗಿದೆ.

ಸಂಬಂಧಪಟ್ಟ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಿ ಈ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದ ಕಿಶನ್ ರೆಡ್ಡಿ ಅವರಿಗೆ ಚಿರಂಜೀವಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕಲಾವಿದರ ಗೌರವ, ಗುರುತು ಮತ್ತು ಸೃಜನಶೀಲ ಹಕ್ಕುಗಳ ರಕ್ಷಣೆ ಸೇರಿದಂತೆ ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಎಲ್ಲರ ಜವಾಬ್ದಾರಿಯಾಗಿದೆ. ತಂತ್ರಜ್ಞಾನ ಸೃಜನಶೀಲತೆಯನ್ನು ಹೆಚ್ಚಿಸಬೇಕೇ ಹೊರತು ವ್ಯಕ್ತಿಗಳ ಗೌರವಕ್ಕೆ ಧಕ್ಕೆ ತರಬಾರದು ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *