ಆಸ್ಪತ್ರೆ ಆವರಣದಲ್ಲಿ ರಹಸ್ಯ ಸುರಂಗ; ಹಮಾಸ್ ಕಿತಾಪತಿಯ ವೀಡಿಯೋ ಬಿಡುಗಡೆ ಮಾಡಿದ ಇಸ್ರೇಲ್

israel-palestine-war-3-300x194

ಗಾಜಾ: ಮಧ್ಯಪ್ರಾಚ್ಯ ಸಮರಕ್ಕೆ ನಾಂದಿ ಹಾಡಿದ್ದ ಹಮಾಸ್ ಉಗ್ರರ ಕಿತಾಪತಿಗಳು ಬಯಲಾಗುತ್ತಲಿವೆ. ಹಮಾಸ್ ಮೂಲೋಚ್ಚಾಟನೆಗೆ ಪಣತೊಟ್ಟು ಸೆಣಸಾಡುತ್ತಿರುವ ಇಸ್ರೇಲ್ ಸೇನೆ ಇಸ್ರೇಲ್‌ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿ ಕುತೂಹಲಕಾರಿ ಸಂಗತಿಯನ್ನು ಬಯಲು ಮಾಡಿದೆ.

ಹಮಾಸ್ ಬಂಡುಕೋರರು ಅಡುಗುದಾಣಗಳ ಧ್ವಂಸ ಮಾಡಲು ಕಾರ್ಯಾಚರಣೆ ನಡೆಸಿರುವ ಇಸ್ರೇಲ್ ಸೇನೆ ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಸುರಂಗವೊಂದನ್ನು ಪತ್ತೆ ಮಾಡಿದೆ. ಇದರಲ್ಲಿ ಹಮಾಸ್‌ ಉಗ್ರರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು ಎನ್ನಲಾಗುತ್ತಿದೆ. ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರರು ಸಂಗ್ರಹಿಸಿಟ್ಟಿದ್ದಾರೆನ್ನಲಾದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್‌ ಸೇನಾ ವಕ್ತಾರರು ತಿಳಿಸಿದ್ದಾರೆ. ಈ ಸುರಂಗದ ವಿಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ.

 

You may have missed