ಹೃದಯಾಘಾತಕ್ಕಿಂತ ಮುಂಚೆ ಕಾಣಿಸಿಕೊಳ್ಳುವ 7 ಲಕ್ಷಣಗಳು

ಹೃದಯಾಘಾತ ಯಾವಾಗ, ಯಾರಿಗೆ, ಹೇಗೆ ಬೇಕಾದರೂ ಸಂಭವಿಸಬಹುದು. ಒಂದು ಕಾಲದಲ್ಲಿ ಮದ್ಯವಯಸ್ಸಿನ ನಂತರ ಕಾಣಿಸಿಕೊಳ್ಳುತ್ತಿದ್ದ ಈ ಹೃದಯಾಘಾತವೆಂಬ ಕಾಯಿಲೆ, ಇದೀಗ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ದತಿಯಿಂದಾಗಿ ಚಿಕ್ಕವಯಸ್ಸಿನಲ್ಲಿಯೇ ಕಾಣಿಸುತ್ತಿದೆ. ಹೃದಯಾಘಾತ ಆಗುವ ಮುಂಚೆ ವ್ಯಕ್ತಿಯಲ್ಲಿ ಈ ಕೆಳಗಿನ ಕೆಲವು ಲಕ್ಷಣಗಳು ಗೋಚರಿಸುತ್ತದೆ.
ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು. ಹಾಗೂ ಪುರುಷರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಲ್ಲಿ ವ್ಯತ್ಯಯವಿರುತ್ತದೆ.
- ತಲೆಸುತ್ತು- ಪದೇ ಪದೇ ತಲೆಸುತ್ತು ಬರುವುದು
- ನಿದ್ದೆಬಾರದಿರುವುದು, ಹೃದಯಾಘಾತ ಉಂಟಾಗುವ ಸ್ಪಲ್ಪ ದಿನಗಳಿಗಿಂತ ಮುಂಚೆ ನಿದ್ದೆ ಸರಿಯಾಗಿ ಬರುವುದಿಲ್ಲ.
- ಮಾನಸಿಕ ಒತ್ತಡ- ವ್ಯಕ್ತಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.
- ಅಜೀರ್ಣ- ಹೊಟ್ಟೆ ಉಬ್ಬರ, ನೋವು ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ರೋಗಿಯಲ್ಲಿ ಕಾಣಿಸಿಕೊಳ್ಳಬಹುದು.
- ಉಸಿರಾಟದಲ್ಲಿ ತೊಂದರೆ- ಎದುರಿಸಿರು ಬರುವುದು , ಸ್ಪಲ್ಪ ಓಡಾಡಿದರೂ ಸುಸ್ತು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.
- ಜ್ವರ- ರೋಗಿಯಲ್ಲಿ ಜ್ವರದ ಲಕ್ಷಣಗಳಾದ, ಚಳಿ, ವಿಪರೀತ ಬೆವರುವುದು, ನಿಶ್ಯಕ್ತಿ ಮೊದಲಾದ ಲಕ್ಷಣಗಳು ಗೋಚರಿಸಬಹುದು.
- ಮೈಕೈನೋವು- ಕತ್ತು, ಭುಜ, ಕಿವಿಯ ಹತ್ತಿರ ನೋವು ಉಂಟಾಗಿ ವ್ಯಕ್ತಿ ನೋವಿನಿಂದ ಬಳಲಬಹುದು. ಈ ರೀತಿಯ ಲಕ್ಷಣಗಳು ಗೋಚರಿಸದ ತಕ್ಷಣ ವೈದ್ಯರ ಬಳಿ ಹೋಗುವುದು ಸೂಕ್ತ