ನೇಪಾಳವನ್ನು 26 ರನ್‌ಗಳಿಗೆ ಆಲೌಟ್ ಮಾಡಿ ಭಾರತ ಎ ತಂಡದಿಂದ ವಿಶ್ವ ದಾಖಲೆ!

0
Cricket-2

ದೋಹಾ: ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ ಎ ತಂಡ ನೇಪಾಳವನ್ನು ಕೇವಲ 26 ರನ್‌ಗಳಿಗೆ ಆಲೌಟ್ ಮಾಡಿ 306 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 332 ರನ್ ಗಳಿಸಿತು. ಕುಮಾರ್ ಕುಶಾಗ್ರಾ 117 ಹಾಗೂ ನಾಯಕ ತಿಲಕ್ ವರ್ಮಾ 107 ರನ್ ಸಿಡಿಸಿ ನಾಲ್ಕನೇ ವಿಕೆಟ್‌ಗೆ 206 ರನ್‌ಗಳ ಜೊತೆಯಾಟವಾಡಿದರು. ಸೂರ್ಯಾಂಶ್ ಶೆಡ್ಗೆ 14 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ನೇಪಾಳ 11.3 ಓವರ್‌ಗಳಲ್ಲಿ 26 ರನ್‌ಗಳಿಗೆ ಕುಸಿಯಿತು. ಪ್ರಿನ್ಸ್ ಯಾದವ್ 5 ಹಾಗೂ ಹರ್ಷಿತ್ ರಾಣಾ 4 ವಿಕೆಟ್ ಕಬಳಿಸಿದರು. ನೇಪಾಳದ ಯಾವುದೇ ಬ್ಯಾಟರ್ ಎರಡಂಕಿ ಮೊತ್ತ ತಲುಪಲಿಲ್ಲ.

Oplus_16908288

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಎದುರಾಳಿಯನ್ನು 26 ರನ್‌ಗಳಿಗೆ ಆಲೌಟ್ ಮಾಡಿದ ಮೊದಲ ‘ಎ’ ತಂಡ ಎಂಬ ವಿಶ್ವ ದಾಖಲೆ ಭಾರತ ಎ ಪಾಲಾಗಿದೆ. 2005ರಲ್ಲಿ ದಕ್ಷಿಣ ಆಫ್ರಿಕಾ ಎ ತಂಡ ನಿರ್ಮಿಸಿದ್ದ 45 ರನ್‌ಗಳ ದಾಖಲೆಯೂ ಪತನಗೊಂಡಿದೆ. 306 ರನ್‌ಗಳ ಗೆಲುವು ಭಾರತ ಎ ತಂಡದ ಅತಿ ದೊಡ್ಡ ಲಿಸ್ಟ್ ಎ ಜಯವಾಗಿದೆ.

ನವೆಂಬರ್ 22ರಂದು ಭಾರತ ಎ ತಂಡ ಪಾಕಿಸ್ತಾನ ಎ ತಂಡವನ್ನು ಎದುರಿಸಲಿದೆ.

Leave a Reply

Your email address will not be published. Required fields are marked *