ನಟಿ ಸಮ್ರೀನ್ ಜೊತೆ ಟೀಂ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್ ನಿಶ್ಚಿತಾರ್ಥ; ನ್ಯೂಜಿಲೆಂಡ್‌ನಲ್ಲಿ ಉಂಗುರ ಬದಲಿಸಿಕೊಂಡ ಜೋಡಿ

0
Arshdeep-Singh-Samreen-Kaur

ನವದೆಹಲಿ: ಟೀಂ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಬಹುಕಾಲದ ಗೆಳತಿ ಹಾಗೂ ನಟಿ ಸಮ್ರೀನ್ ಕೌರ್ ಜೊತೆ ನವೆಂಬರ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅರ್ಷದೀಪ್ ಮೊಣಕಾಲೂರಿ ಕುಳಿತು ಸಮ್ರೀನ್‌ಗೆ ಉಂಗುರ ತೊಡಿಸಿದ್ದಾರೆ. ಈ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಜೀವನದಲ್ಲಿ ಸಿಕ್ಕ ಎಲ್ಲ ಉಡುಗೊರೆಗಳಿಗಿಂತ ಒಬ್ಬರನ್ನೊಬ್ಬರು ಪಡೆದಿರುವುದೇ ದೊಡ್ಡ ಸಂತೋಷ ಎಂಬ ಭಾವನಾತ್ಮಕ ಸಂದೇಶ ಬರೆದಿದ್ದಾರೆ.

ಕಳೆದ ಜುಲೈನಲ್ಲಿ ಸಮ್ರೀನ್ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಅರ್ಷದೀಪ್ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದರು. ಧರ್ಮಶಾಲಾದಲ್ಲಿ ಇಬ್ಬರೂ ಕೈಕೈ ಹಿಡಿದು ಓಡಾಡುತ್ತಿದ್ದ ವಿಡಿಯೋ ಕೂಡ ಈ ಹಿಂದೆ ವೈರಲ್ ಆಗಿತ್ತು.

ಇನ್ನು ಸಮ್ರೀನ್ ಕೌರ್ ಪಂಜಾಬಿ ಮ್ಯೂಸಿಕ್ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ’83’ ಸಿನಿಮಾ ಹಾಗೂ ‘ನೇಲ್ ಪಾಲಿಷ್’ ಸೇರಿದಂತೆ ಹಲವು ಮನರಂಜನಾ ಪ್ರಾಜೆಕ್ಟ್‌ಗಳಲ್ಲಿ ಅಭಿನಯಿಸಿದ್ದಾರೆ. ‘ಮಿಸ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರ’ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಅರ್ಷದೀಪ್ ಅವರ ನಿಶ್ಚಿತಾರ್ಥದ ಸುದ್ದಿ ತಿಳಿಯುತ್ತಿದ್ದಂತೆ ಕ್ರಿಕೆಟ್ ವಲಯದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.

Leave a Reply

Your email address will not be published. Required fields are marked *