ವೈಟ್ಹೌಸ್ನಲ್ಲಿ 2,500 ಅತಿಥಿಗಳ ಸಾಮರ್ಥ್ಯದ ಭದ್ರತಾ ಬಾಲ್ರೂಂ; ಡ್ರೋನ್, ಕ್ಷಿಪಣಿ ದಾಳಿಯಿಂದ ರಕ್ಷಣೆ ನೀಡುವ ವಿನ್ಯಾಸ

ವಾಷಿಂಗ್ಟನ್: ಅಮೆರಿಕದ ವೈಟ್ಹೌಸ್ನಲ್ಲಿ 2,500 ಅತಿಥಿಗಳ ಸಾಮರ್ಥ್ಯದ ಅತ್ಯಾಧುನಿಕ ಭದ್ರತಾ ಬಾಲ್ರೂಂ ನಿರ್ಮಿಸಲಾಗುತ್ತಿದೆ. ಡ್ರೋನ್, ಕ್ಷಿಪಣಿ ಮತ್ತು ಗುಂಡಿನ ದಾಳಿಯಿಂದ ರಕ್ಷಣೆ ಒದಗಿಸುವ ರೀತಿಯಲ್ಲಿ ಕಟ್ಟಡ ವಿನ್ಯಾಸಗೊಳಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಚೀನಾ, ರಷ್ಯಾ ಸೇರಿದಂತೆ ವಿದೇಶಿ ನಾಯಕರಿಗೆ ಉನ್ನತ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಐದು ಅಂತಸ್ತುಗಳಷ್ಟು ಆಳದಲ್ಲಿ ಭೂಗತ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದ್ದು, ಸೇನೆಯ ಅಗತ್ಯಗಳಿಗೆ ಅನುಗುಣವಾಗಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

100ಕ್ಕೂ ಹೆಚ್ಚು ಡ್ರೋನ್ಗಳನ್ನು ಇರಿಸಬಹುದಾದ ವ್ಯವಸ್ಥೆ ಹಾಗೂ ಹೆಲಿಕಾಪ್ಟರ್ಗಳ ಭಾರ ತಡೆದುಕೊಳ್ಳುವ ಮೇಲ್ಛಾವಣಿ ನಿರ್ಮಿಸುವ ಯೋಜನೆಯಿದೆ. 50 ಅಡಿಗೂ ಎತ್ತರದ ಸೀಲಿಂಗ್, ಅಮೃತಶಿಲೆಯ ನೆಲಹಾಸು ಮತ್ತು ಗಾಜಿನ ವಿನ್ಯಾಸ ಇರಲಿದೆ.
