15ರ ಹರೆಯದ ಖುಷ್ಬು ದರ್ಜಾಡಾ ಯೂತ್ ಒಲಿಂಪಿಕ್ಸ್ ಜೂಡೋ ಫೈನಲ್‌ಗೆ; ಭಾರತಕ್ಕೆ ಬೆಳ್ಳಿ ಖಚಿತ

0
India-Khushbu-Darjada-Youth-Olympics-Judo-2026

ಡಾಕರ್: ಸೆನೆಗಲ್‌ನ ಡಾಕರ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ 15 ವರ್ಷದ ಖುಷ್ಬು ರಜಕ್‌ಭಾಯಿ ದರ್ಜಾಡಾ ಜೂಡೋ ಫೈನಲ್ ಪ್ರವೇಶಿಸಿದ್ದಾರೆ. ಮಹಿಳೆಯರ 63 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪುವ ಮೂಲಕ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ಗೆದ್ದರೆ ಯೂತ್ ಒಲಿಂಪಿಕ್ಸ್ ಜೂಡೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಈ ಹಿಂದೆ ಜೂಡೋ ಪದಕ ಲಭಿಸಿದ್ದು 2018ರಲ್ಲಿ. ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಥಾಂಗ್‌ಜಮ್ ತಬಾಬಿ ದೇವಿ ಮಹಿಳೆಯರ 44 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

Leave a Reply

Your email address will not be published. Required fields are marked *