ಸಿಂದೂರ್ ವಾರ್ಷಿಕೋತ್ಸವಕ್ಕೂ ಮುನ್ನ ಭಾರತೀಯ ಸೇನೆಯ ಗರ್ಜನೆ; ಪಾಕಿಸ್ತಾನಕ್ಕೆ ಕಠಿಣ ಸಂದೇಶ

0
Indian Army- Op[eration Sindhoor- 1

ನವದೆಹಲಿ: ಆಪರೇಷನ್ ಸಿಂದೂರ್ ವಾರ್ಷಿಕೋತ್ಸವಕ್ಕೂ ಮುನ್ನ, ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶಗಳಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ನಿಖರ ದಾಳಿಗಳನ್ನು ಬಹಿರಂಗಪಡಿಸಿ ಗಟ್ಟಿಯಾದ ಸಂದೇಶ ನೀಡಿದೆ.

ಭಾನುವಾರ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಸೇನೆ, “ನಿಖರತೆ ಚಾಲಿತ… ಭಯೋತ್ಪಾದನೆಗೆ ಗುರಿ… ಶಾಶ್ವತ ಫಲಿತಾಂಶ” ಎಂದು ಹೇಳಿದೆ. ಈ ದಾಳಿಯಲ್ಲಿ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳಿಗೆ ಸೇರಿದ ಒಂಬತ್ತು ಉಗ್ರ ಶಿಬಿರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ತಿಳಿಸಿದೆ. “ಭಾರತ ಮರೆಯೋದಿಲ್ಲ” ಎಂಬ ಸಂದೇಶದೊಂದಿಗೆ ಕಮಾಂಡ್ ಸೆಂಟರ್ ದೃಶ್ಯವನ್ನೂ ಹಂಚಿಕೊಂಡಿದೆ.

ಇದಕ್ಕೂ ಮುನ್ನ ಹಂಚಿಕೊಂಡ ಮತ್ತೊಂದು ಪೋಸ್ಟ್‌ನಲ್ಲಿ ಸೇನೆ ‘ಆತ್ಮನಿರ್ಭರ ಭಾರತ’ ಸಿದ್ಧತೆಯನ್ನು ಒತ್ತಿಹೇಳಿದ್ದು, ಕಾರ್ಯಾಚರಣೆಯ ನಂತರದ ಸಿದ್ಧತೆಯನ್ನೂ ತೋರಿಸಿದೆ. 50 ಹೊಸ ಮಿಷನ್ ಘಟಕಗಳು, ನಾಲ್ಕು ಚುರುಕಾದ ರಚನೆಗಳು, ಐದು ಲಕ್ಷಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು, ಎರಡು ಲಕ್ಷಕ್ಕೂ ಹೆಚ್ಚು ಉಪಕರಣಗಳು ಸೇನೆಗೆ ಸೇರ್ಪಡೆಯಾಗಿವೆ ಎಂದು ತಿಳಿಸಿದೆ.

ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಹಿನ್ನೆಲೆ, ಸೇನೆ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. “ಭಾರತದ ವಿರುದ್ಧದ ಯಾವುದೇ ಕೃತ್ಯಕ್ಕೆ ಪ್ರತಿಕ್ರಿಯೆ ಖಚಿತ… ನ್ಯಾಯ ಒದಗಿಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದೆ.

ದಾಳಿಯ ನಂತರ ಆರಂಭವಾದ ‘ಆಪರೇಷನ್ ಮಹಾದೇವ್’ನಲ್ಲಿ, ಡಚಿಗಮ್-ಮಹಾದೇವ್ ಪರ್ವತ ಪ್ರದೇಶದಲ್ಲಿ 93 ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ ಮೂವರು ಪ್ರಮುಖ ಉಗ್ರರನ್ನು ಹತಮಾಡಲಾಗಿದೆ. 300 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಾಚರಣೆ ಸೇನೆಯ ಸಾಮರ್ಥ್ಯವನ್ನು ತೋರಿಸಿದೆ.

ಇನ್ನೊಂದೆಡೆ, “ಮಾನವೀಯತೆಯ ಗಡಿಗಳನ್ನು ದಾಟಿದರೆ ಪ್ರತಿಕ್ರಿಯೆ ನಿರ್ಣಾಯಕ” ಎಂದು ಸೇನೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ‘ಕೆಲವು ಗಡಿಗಳನ್ನು ಎಂದಿಗೂ ದಾಟಬಾರದು’ ಎಂಬ ಸಂದೇಶದೊಂದಿಗೆ ಭಾರತ ನಕ್ಷೆಯ ಚಿತ್ರವನ್ನೂ ಹಂಚಿಕೊಂಡಿದೆ.

ಗಮನಾರ್ಹವಾಗಿ, 2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ‘ಆಪರೇಷನ್ ಸಿಂದೂರ್’ ಮೂಲಕ ಭಾರತ ತನ್ನ ಶೂನ್ಯ ಸಹಿಷ್ಣುತೆ ನೀತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

You may have missed