ಶತ್ರು ದೇಶಗಳಿಗೆ ಸಮರ್ಥ ಉತ್ತರ ನೀಡಲು ಭಾರತ ಸಜ್ಜು ; ಅತ್ಯಾಧುನಿಕ ಕ್ಷಿಪಣಿ ಖರೀದಿ

0
ISRO-IRNSS-1G

ನೆರೆಹೊರೆಯ ದೇಶಗಳಿಂದ ದಶಕಗಳಿಂದಲೂ ದಾಳಿಯ ಭೀತಿ ಎದುರಿಸುತ್ತಿರುವ ಪಾಕಿಸ್ತಾನ ಇದೀಗ, ನೆರೆಯ ದೇಶಗಳಿಗೆ ಸಮರ್ಥ ಉತ್ತರ ನೀಡಲು ಸಜ್ಜಾಗಿದೆ. ಹೌದು ಭಾರತ-ರಷ್ಯಾದಿಂದ ಸುಮಾರು 40 ಸಾವಿರ ಕೋಟಿ ಮೌಲ್ಯದ ಅತ್ಯಾಧುನಿಕ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದೆ.

ಪಾಕಿಸ್ತಾನ ಮತ್ತು ಚೀನಾದ ಬಳಿ ಅತ್ಯಾಧುನಿಕ ವಾಯುದಾಳಿ ಶಸ್ತ್ರಾಸ್ತ್ರಗಳಿದ್ದು, ಶತ್ರು ರಾಷ್ಟ್ರ ಪಾಕಿಸ್ತಾನ ಮತ್ತು ಅದಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಚೀನಾ ಯಾವುದೇ ಕ್ಷಣದಲ್ಲಿ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಇಂತಹ ಸವಾಲನ್ನು ಎದುರಿಸುವ ಸಲುವಾಗಿ  ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಮಾತ್ರ ಇರುವ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂಗಳನ್ನು ಭಾರತ ರಷ್ಯಾದಿಂದ ಖರೀದಿಸಲು ಮುಂದಾಗಿದ್ದು, ಇದಕ್ಕೆ  ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ನೇತೃತ್ವದ ರಕ್ಷಣಾ ಖರೀದಿ ಪರಿಷತ್ತು ಟ್ರಿಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ 5 ಯೂನಿಟ್ಗಳನ್ನು ಖರೀದಿಸಲು ಒಪ್ಪಿದೆ. ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ರಷ್ಯಾದ ಎಸ್-400 ಟ್ರಯಂಫ್ ಕ್ಷಿಪಣಿಗಳನ್ನು ಭಾರತ ಖರೀದಿಗೆ ಮುಂದಾಗಿದ್ದು, ಪ್ರಸ್ತುತ ಚೀನಾ ಸೇನೆಯಲ್ಲಿರುವ ಅತ್ಯಂತ ಬಲಾಢ್ಯ ವಾಯುದಾಳಿಯನ್ನು ನಿಗ್ರಹಿಸುವ ಶಕ್ತಿ ಈ ಟ್ರಯಂಫ್ ಕ್ಷಿಪಣಿಗಳಿಗೆ ಇದೆ ಎನ್ನಲಾಗುತ್ತಿದೆ.

ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂಗಳ ಖರೀದಿ ಸಂಬಂಧ ಈಗಾಗಲೇ ಉಭಯ ದೇಶಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಶೀಘ್ರದಲ್ಲಿ ಭಾರತ ಮತ್ತು ರಷ್ಯಾ ಸುಮಾರು 40 ಸಾವಿರ ಕೋಟಿ ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಿವೆ. ಈ ಒಪ್ಪಂದದ ಪ್ರಕಾರ, ಭಾರತಕ್ಕೆ 5 ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂಗಳು ಬರಲಿವೆ. ಎಸ್-400 ಟ್ರಯಂಫ್ ಕ್ಷಿಪಣಿಗಳು ನಾಲ್ಕನೇ ತಲೆಮಾರಿನ ಯುದ್ಧಾಸ್ತ್ರವಾಗಿದ್ದು, ತನ್ನ ವರ್ಗದಲ್ಲಿ ವಿಶ್ವದ ಅತ್ಯುತ್ತಮ ಕ್ಷಿಪಣಿ ಭಂಜಕವೆಂದು ಖ್ಯಾತಿಗಳಿಸಿದೆ.

ಎಸ್-400 ಟ್ರಯಂಫ್ ಕ್ಷಿಪಣಿ ಯುದ್ಧವಿಮಾನ, ಸ್ಟೀಲ್ತ್ ಫೈಟರ್ ಜೆಟ್, ಕ್ಷಿಪಣಿ, ಡ್ರೋನ್ ಹೀಗೆ ಯಾವುದೇ ವಾಯು ದಾಳಿಯನ್ನು ಯಶಸ್ವಿಯಾಗಿ ತಡೆದು ನಾಶ ಮಾಡುವ ಸಾಮರ್ಥ್ಯ ವನ್ನು ಹೊಂದಿದೆ.
ಭಾರತದ ಕಡೆಗೆ ವೈರಿ ದೇಶಗಳಾದ ಚೀನಾ ಅಥವಾ ಪಾಕಿಸ್ತಾನದಿಂದ ವಾಯುದಾಳಿ ನಡೆದರೆ, ಶತ್ರುರಾಷ್ಟ್ರಗಳಿಂದ ಬರುವ ಕ್ಷಿಪಣಿ ಅಥವ ವಿಮಾನಗಳನ್ನು ಹೊಡೆದುರುಳಿಸುವ ಶಕ್ತಿಯನ್ನು ಎಸ್-400 ಟ್ರಯಂಫ್ ಕ್ಷಿಪಣಿ ಹೊಂದಿದೆ.

Leave a Reply

Your email address will not be published. Required fields are marked *

You may have missed