ಶತಮಾನ ಕಂಡರಿಯದ ಭೂಕಂಪ; ಸ್ಮಶಾನದಂತಾದ ವೆನೆಜುವೆಲಾ

0
Twin-earthquakes-rock-Venezuela-300x199-2

ಕ್ಯಾರಕಾಸ್: ದಕ್ಷಿಣ ಅಮೆರಿಕಾದ ರಾಷ್ಟ್ರ ವೆನೆಜುವೆಲಾದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ಭಾರಿ ಆತಂಕ ಸೃಷ್ಟಿಸಿದ್ದು, ಸರ್ಕಾರ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ. ಶತಮಾನ ಕಂಡರಿಯದ ಈ ಭೀಕರ ಸಾವಿರಾರು ಜನರು ಸಾವನ್ನಾಪಿರುವ ಶಂಕೆ ಇದ್ದು, ಈ ಸಂಖ್ಯೆ ಲಕ್ಷ ದಾಟುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಮೊದಲು 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುಮಾರು ಒಂದು ನಿಮಿಷದೊಳಗೆ 7.5 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ದಾಖಲಾಗಿದೆ. ಎರಡೂ ಭೂಕಂಪಗಳ ಕೇಂದ್ರಬಿಂದು ರಾಜಧಾನಿ ಕ್ಯಾರಕಾಸ್‌ನ ಪಶ್ಚಿಮಕ್ಕೆ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ಮೊರೊನ್ ಕರಾವಳಿ ಪ್ರದೇಶದ ಸಮೀಪ ಇತ್ತು.

ಭೂಕಂಪಗಳ ಪರಿಣಾಮವಾಗಿ ಕ್ಯಾರಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ಕೆಲವು ಕಟ್ಟಡಗಳು ಕುಸಿದಿರುವ ವರದಿಗಳು ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಾನಿಯ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ಭೂಕಂಪಗಳು ಕೇವಲ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದರಿಂದ ಅವುಗಳ ಪರಿಣಾಮ ಹೆಚ್ಚು ತೀವ್ರವಾಗಿರುವ ಸಾಧ್ಯತೆ ಇದೆ. ದೇಶದ ವಿವಿಧ ಭಾಗಗಳಲ್ಲಿ ಹಾನಿ ಸಂಭವಿಸಿದೆ ಎಂದು ಆಂತರಿಕ, ನ್ಯಾಯ ಮತ್ತು ಶಾಂತಿ ಸಚಿವ ಡಿಯೊಸ್ಡಾಡೊ ಕಬೆಲ್ಲೊ ತಿಳಿಸಿದ್ದಾರೆ.

ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದು, ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

ಇದರವರೆಗೆ ಸಾವುನೋವುಗಳ ಕುರಿತು ಅಧಿಕೃತ ಅಂಕಿ-ಅಂಶ ಪ್ರಕಟವಾಗಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಅನಧಿಕೃತ ವರದಿಗಳಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದರೂ, ಸರ್ಕಾರ ಈ ಮಾಹಿತಿಯನ್ನು ದೃಢಪಡಿಸಿಲ್ಲ.

ಭೂಕಂಪದ ಹಾನಿಯಿಂದ ಮೈಕ್ವೆಟಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ರಕ್ಷಣಾ, ಪರಿಹಾರ ಹಾಗೂ ವೈದ್ಯಕೀಯ ಕಾರ್ಯಾಚರಣೆಗಳಿಗಾಗಿ ಭದ್ರತಾ ಪಡೆಗಳು ಮತ್ತು ನಾಗರಿಕ ರಕ್ಷಣಾ ತಂಡಗಳನ್ನು ದೇಶಾದ್ಯಂತ ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *

You may have missed