ವಿಧಾನ ಸೌಧ, ವಿಕಾಸ ಸೌಧ ಕಟ್ಟಡಗಳ ಪ್ರವೇಶ ಸುರಕ್ಷತೆ ಬಗ್ಗೆ ವಿಶೇಷ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

0
vikasasoudha-vidhanasoudha1-300x169

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಕಟ್ಟಡಗಳಾದ ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಆಗಮಿಸುವವರ ಬಗ್ಗೆ, ಇಪ್ಪತ್ನಾಲ್ಕು ಗಂಟೆಗಳ ಕಣ್ಗಾವಲು ಇದ್ದು, ಭದ್ರತೆ ಬಗ್ಗೆ ಯಾವುದೇ ರೀತಿಯ ರಾಜಿಯಿಲ್ಲ, ಎಂದು ಗೃಹ ಸಚಿವ  ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನ ಪರಿಷತ್‌ನ  ಪ್ರಶ್ನೋತ್ತರ ವೇಳೆಯಲ್ಲಿ, ಕಲಾಪದಲ್ಲಿ, ಕಾಂಗ್ರೆಸ್ ಸದಸ್ಯ  ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅರಗ ಜ್ಞಾನೇಂದ್ರ, ಕಟ್ಟಡಗಳ ಪ್ರವೇಶ ಸ್ಥಳಗಳಲ್ಲಿ ಅಳವಡಿಸಿದ, ತಪಾಸಣಾ ಯಂತ್ರೋಪಕರಣ ಗಳು, ಬಹಳ ಹಳೆಯ ಕಾಲದವುಗಳಾಗಿದ್ದು ಅವುಗಳನ್ನು ಬದಲಾಯಿಸಲಾಗುತ್ತಿದೆ ಎಂದು ಸದಸ್ಯರಿಗೆ ಮಾಹಿತಿ ನೀಡಿದರು.

“ವಿಧಾನಸೌಧ ಹಾಗೂ ವಿಕಾಸ ಸೌಧ ಕಟ್ಟಡಗಳಿಗೆ ಪ್ರವೇಶ ಪಡೆಯುವವರ ಬಗ್ಗೆ, ಎಲ್ಲಾ ರಕ್ಷಣಾ ಪ್ರೋಟೋಕಾಲ್ ನಿಯಮಗಳ ಪ್ರಕಾರ ತಪಾಸಣೆ ನಡೆಸಲಾಗುತ್ತಿದ್ದು, ದಿನದ 24 ಗಂಟೆ ಮೂರು ಪಾಳಿಗಳಲ್ಲಿ, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ” ಎಂದೂ ಸದನಕ್ಕೆ ತಿಳಿಸಿದರು.

ನೂತನ ತಪಾಸಣಾ ಯಂತ್ರೋಪಕರಣ ಗಳನ್ನು ಅಳವಡಿಸಲು, ಟೆಂಡರ್ ಕರೆಯಲಾಗಿದೆ ಎಂದೂ ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *

You may have missed