ವಕ್ಫ್ ವಿವಾದದ ಪ್ರತಿಧ್ವನಿ; ವ್ಯವಸ್ಥೆ ಪುನರುತ್ಥಾನಕ್ಕೆ ಮುನ್ನುಡಿ; VHP ಮುಂದಾಳುತ್ವದಲ್ಲಿ ‘ಸಂತ ಸಮ್ಮೇಳನ”
ಬೆಂಗಳೂರು: ವಿಶ್ವ ಹಿಂದೂ ಪರಿಷದ್ ಕರ್ನಾಟಕ ರಾಜ್ಯದ ಸಂತ ಸಮಾವೇಶ ವನ್ನೂ ದಿನಾಂಕ : 23-11-2024 ರ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:30 ರವರೆಗೆ ಬೆಂಗಳೂರಿನ ವಾಣಿ ವಿಲಾಸ ರೋಡ್ ವಿವಿ ಪುರಂ ವಾಸವಿ ಕನ್ವೆನ್ಷನ್ ಹಾಲ್ ನಲ್ಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯದಿಂದ ಪೂಜ್ಯ ನಿರ್ಮಲಾನಂದ ಸ್ವಾಮೀಜಿ ಯವರು ಆದಿಚುಂಚನಗಿರಿ ಮಠ, ಪೂಜ್ಯ ಪೇಜಾವರ ಶ್ರೀಗಳು ಉಡುಪಿ, ಪೂಜ್ಯ ಮಾದರ ಚೆನ್ನಯ್ಯ ಸ್ವಾಮೀಜಿ ಚಿತ್ರದುರ್ಗ, ಪೂಜ್ಯ ವಚನಾನಂದ ಸ್ವಾಮಿಜೀ ಹರಿಹರ, ಪೂಜ್ಯ ಬಸವಲಿಂಗ ಸ್ವಾಮಿಜೀ ಜ್ಞಾನಯೋಗಾಶ್ರಮ ಬಿಜಾಪುರ , ಪೂಜ್ಯ ವಿಶ್ವಪ್ರಿಯ ಸ್ವಾಮೀಜಿ ಅದಮಾರು ಮಠ, ಸಹಿತ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವಸ್ಥಾನಗಳನ್ನು ಸರ್ಕಾರದ ಅಧೀನತೆಯಿಂದ ಹಿಂದೂಗಳ ಸ್ವಾಯತ್ತತೆ ನೀಡುವುದರ ಬಗ್ಗೆ ಹಾಗೂ ಈಗಿನ ವಕ್ಫ್ ಕಾನೂನು ರದ್ದು ಗೊಳಿಸುವ ಬಗ್ಗೆ ನಿರ್ಣಯಮಾಡಿ ಮಧ್ಯಾಹ್ನ 1:30 ಕ್ಕೆ ಎಲ್ಲಾ ಸ್ವಾಮೀಜಿಗಳು ಮತ್ತು ವಿಶ್ವ ಹಿಂದೂ ಪರಿಷದ್ ಅಂತಾರಾಷ್ಟ್ರೀಯ ಅಧ್ಯಕ್ಷರಾದ ಮನಾನೀಯ ಅಲೋಕ್ ಕುಮಾರ್, ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗುವುದು ಎಂದು ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.