ರಾಮಲಿಂಗಂ ಕೊಲೆ ಪ್ರಕರಣ: ಪಿಎಫ್‌ಐನ ನಾಲ್ವರ ಮಾಜಿ ವಿರುದ್ಧ ಎನ್‌ಐಎ ಆರೋಪಪಟ್ಟಿ

0
NIA-300x212-1

ಚೆನ್ನೈ: 2019ರ ರಾಮಲಿಂಗಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ನಾಲ್ವರು ಮಾಜಿ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

ಕೆ. ಮೊಹಿದೀನ್, ಮೊಹಮ್ಮದ್ ಇಮ್ರಾನ್, ತಮೀಮ್ ಅನ್ಸಾರಿ ಮತ್ತು ಅಸ್ಮತ್ ವಿರುದ್ಧ, ಪ್ರಕರಣದ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ತಿರುಭುವನಂನಲ್ಲಿ ನಡೆದ ರಾಮಲಿಂಗಂ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಉದ್ದೇಶಪೂರ್ವಕವಾಗಿ ನೆರವು ನೀಡಲಾಗಿದೆ ಎಂದು ಎನ್‌ಐಎ ತಿಳಿಸಿದೆ.

2019ರ ಫೆಬ್ರವರಿ 5ರಂದು ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯಲು ಯತ್ನಿಸಿದ್ದ ವೇಳೆ ರಾಮಲಿಂಗಂ ಅವರನ್ನು ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ತನಿಖೆಯಲ್ಲಿ ಇಬ್ಬರು ಪರಾರಿಯಾಗಿದ್ದ ಆರೋಪಿಗಳಿಗೆ ಸುಮಾರು ಆರು ವರ್ಷಗಳ ಕಾಲ ಆಶ್ರಯ ನೀಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಇದುವರೆಗೆ 18 ಮಂದಿಯ ವಿರುದ್ಧ ಆರೋಪಪತ್ರ ಸಲ್ಲಿಸಲಾಗಿದ್ದು, ಹಲವರನ್ನು ಎನ್‌ಐಎ ಬಂಧಿಸಿದೆ.

ಇದೇ ವೇಳೆ, ಪಶ್ಚಿಮ ಬಂಗಾಳದ ಭಂಗಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕ ಸಾಕತ್ ಮೊಲ್ಲಾ ಅವರನ್ನು 14 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಅವರಿಂದ ಮೊಬೈಲ್ ಫೋನ್ ಹಾಗೂ ಪೆನ್‌ಡ್ರೈವ್ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದೆ.

4 former cadres of banned PFI have been chargesheeted in the Ramalingam murder case. Accused have been charged with harbouring 2 proclaimed offenders who had absconded after the fatal attack in February 2019. pic.twitter.com/IkoneU1XKf

— NIA India (@NIA_India) June 6, 2026

ಸ್ಫೋಟ ಪ್ರಕರಣದಲ್ಲಿ ಈವರೆಗೆ ಮೂವರು ಬಂಧಿತರಾಗಿದ್ದು, ತನಿಖೆಯನ್ನು ಎನ್‌ಐಎ ಮುಂದುವರಿಸಿದೆ.

Leave a Reply

Your email address will not be published. Required fields are marked *