ಯುದ್ಧದಿಂದ ಯಾರಿಗೂ ಲಾಭವಿಲ್ಲ, ಆದರೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದ ಇರಾನ್

0
Us-Army-Iran-War

ಟೆಹ್ರಾನ್: ಅಮೆರಿಕದೊಂದಿಗಿನ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಲು ಇರಾನ್ ಸಿದ್ಧವಿದೆ. ಆದರೆ ಶರಣಾಗುವುದಿಲ್ಲ ಎಂದು ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಎಚ್ಚರಿಸಿದ್ದಾರೆ. ರಾಜತಾಂತ್ರಿಕ ಪರಿಹಾರಕ್ಕಾಗಿ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸರ್ಕಾರಕ್ಕೆ ವಿಶೇಷ ಅಧಿಕಾರ ನೀಡಿದ್ದಾರೆ.

ಕತಾರ್ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಸಂಘರ್ಷ ಅಂತ್ಯಗೊಳಿಸಲು ಮಾತುಕತೆ ನಡೆಯುತ್ತಿದೆ. ಇರಾನ್ ಮಾತುಕತೆ ಹಾಗೂ ರಕ್ಷಣಾ ಕ್ರಮ ಎರಡಕ್ಕೂ ಸಿದ್ಧವಿದೆ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆ. ಇರಾನ್‌ನ ಷರತ್ತುಗಳನ್ನು ಒಪ್ಪಿದರೆ ಹಾರ್ಮುಜ್ ಜಲಸಂಧಿ ತೆರೆಯಲು ಸಿದ್ಧವಿದೆ. ಅಮೆರಿಕ ಮತ್ತಷ್ಟು ಸೇನಾ ಸಂಘರ್ಷಕ್ಕೆ ಮುಂದಾದರೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ಬಳಿಕ ಇರಾನ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿತ್ತು. ಏಪ್ರಿಲ್ 8ರಂದು ಕದನ ವಿರಾಮ ಜಾರಿಯಾದರೂ, ಪರಮಾಣು ಕಾರ್ಯಕ್ರಮ ಮತ್ತು ನಿರ್ಬಂಧಗಳ ಕುರಿತ ಅಂತಿಮ ಒಪ್ಪಂದ ಸಾಧ್ಯವಾಗದೆ ಬಿಕ್ಕಟ್ಟು ಮುಂದುವರಿದಿದೆ.

Leave a Reply

Your email address will not be published. Required fields are marked *