ಮಧ್ಯಪ್ರಾಚ್ಯ ಸಂಘರ್ಷ; ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ

israel palestine clash

ಜೆರುಸಲೆಂ: ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಮತ್ತೆ ಮುಂದುವರಿದಿದೆ. ಪೇಜರ್ ಬ್ಲಾಸ್ಟ್ ನಂತರ ಇದೀಗ ಇಸ್ರೇಲ್ ಸೇನೆ ಹಮಾಸ್ ಉಗ್ರರ ನೆಲೆಗಳ ಮೇಲೆ ಭಾರೀ ವಾಯುದಾಳಿ ನಡೆಸಿದೆ.

ಹಮಾಸ್ ಉಗ್ರರನ್ನು ಬೆಂಬಲಿಸುವ ಹಿಜ್ಬುಲ್ಲಾ ಉಗ್ರರು ಹಾಗೂ ಇಸ್ರೇಲ್ ಸೇನೆಯ ನಡುವೆ ಹಲವು ದಿನಗಳಿಂದ ಸಂಘರ್ಷ ಏರ್ಪಟ್ಟಿದ್ದು, ಇಸ್ರೇಲ್ ಸೇನೆ ಶುಕ್ರವಾರ ರಾತ್ರಿ ಬೈರೂತ್ ನಲ್ಲಿ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಮೊಹಮ್ಮದ್ ಅಲಿ ಇಸ್ಮಾಯಿಲ್ ಮತ್ತು ಹುಸೇನ್ ಅಹ್ಮದ್ ಇಸ್ಮಾಯಿಲ್ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

You may have missed