ಪ್ರಿಯಾಂಕ್ ಖರ್ಗೆ ಮೊದಲ ಬಾರಿ ಶಾಸಕರಾಗಿದ್ದಾಗಲೇ ಸಚಿವರಾಗಿದ್ದರು; ಇಕ್ಬಾಲ್ ಹುಸೇನ್

0
Kharge - Siddaramaiah- DKS- Shivakumar

ರಾಮನಗರ: ರಾಜ್ಯ ಸಚಿವ ಸಂಪುಟ ಪುನಾರಚನೆ ಚರ್ಚೆ ನಡುವೆಯೇ ಕಾಂಗ್ರೆಸ್ ಒಳಗೆ ಸಚಿವ ಸ್ಥಾನಕ್ಕಾಗಿ ಒತ್ತಾಯಗಳು ಜೋರಾಗಿವೆ. “ಸಚಿವ ಸ್ಥಾನ ಪ್ರಿಯಾಂಕ್ ಖರ್ಗೆ ಅವರಿಗೆ ಮಾತ್ರ ಏಕೆ? ನಮಗೂ ಅವಕಾಶ ಬೇಕು” ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸ್ಪಷ್ಟವಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಹಾಗೂ ಎರಡನೇ ಬಾರಿ ಗೆದ್ದ ಶಾಸಕರಿಗೂ ಈ ಬಾರಿ ಮಂತ್ರಿಗಿರಿ ನೀಡಬೇಕು ಎಂದು ಒತ್ತಾಯಿಸಿದರು. “ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ಮೊದಲ ಬಾರಿ ಶಾಸಕರಾಗಿದ್ದಾಗಲೇ ಸಚಿವರಾಗಿದ್ದರು. ಹಾಗಾಗಿ ಈಗಲೂ ಹೊಸದಾಗಿ ಆಯ್ಕೆಯಾದವರಿಗೂ ಅವಕಾಶ ಸಿಗಬೇಕು” ಎಂದು ಹೇಳಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಔತಣಕೂಟದಲ್ಲಿ ಸುಮಾರು 55 ಮಂದಿ ಶಾಸಕರು ಸೇರಿ ಈ ವಿಚಾರವನ್ನು ಚರ್ಚಿಸಿದ್ದೇವೆ. ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿ ಬಳಿ ಮಂಡಿಸಿದ್ದೇವೆ. ಮುಖ್ಯಮಂತ್ರಿಗಳು ಸ್ಪಂದಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಮೂರು-ನಾಲ್ಕು ಬಾರಿ ಗೆದ್ದ ಹಿರಿಯ ಶಾಸಕರು ಈಗಾಗಲೇ ಸಚಿವ ಸ್ಥಾನಕ್ಕಾಗಿ ಸಭೆ ನಡೆಸಿ ಮನವಿ ಮಾಡಿರುವ ಹಿನ್ನೆಲೆ, ಮೊದಲ ಮತ್ತು ಎರಡನೇ ಬಾರಿ ಗೆದ್ದ ಶಾಸಕರೂ ಕೂಡ ಒಗ್ಗೂಡಿ ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಿಗೆ ತಮ್ಮ ಬೇಡಿಕೆಯನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಸಂಪುಟ ಪುನಾರಚನೆ ಸಮೀಪಿಸುತ್ತಿರುವಾಗಲೇ ಕಾಂಗ್ರೆಸ್ ಒಳಗಿನ ಅಸಮಾಧಾನ ಬಹಿರಂಗವಾಗುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ..

Leave a Reply

Your email address will not be published. Required fields are marked *

You may have missed