‘ನೀವು ಸಿಎಂ ಆದರೂ ಸಿದ್ದರಾಮಯ್ಯನವರೇ ಸೂಪರ್ ಸಿಎಂ’! ಅಶೋಕ್ ವ್ಯಂಗ್ಯ

0
Dr.Yathindra Siddaramaiah

ಬೆಂಗಳೂರು: ಚಲನಚಿತ್ರ ಕಲಾವಿದರಿಗೆ ನಟ್ಟು ಬೋಲ್ಟು ಟೈಟು ಮಾಡ್ತೀನಿ ಅನ್ನೋ ಧಮ್ಕಿ ಹಾಕೋಕೆ ಧೈರ್ಯ ಇದೆ. ಸಿಎಂ ಪುತ್ರ ಯತೀಂದ್ರ ಅವರಿಗೆ ಒಂದು ನೋಟೀಸು ಕೊಡೋ ಧೈರ್ಯನೂ ಡಿಸಿಎಂ ಡಿ.ಕೆ.ಶಿವಕುಮಾರ್’ಗೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಶಾಸಕರಿಗೆ ತಗ್ಗಿ-ಬಗ್ಗಿ ನಡೀಬೇಕು ಅಂತ ಧಮ್ಕಿ ಹಾಕೋ ಧೈರ್ಯ ಇದೆ. ಕಾರ್ಯಕರ್ತರಿಗೆ “ನಿಮ್ಮ ಛತ್ರಿ ಬುದ್ಧಿ ಗೊತ್ತು” ಅಂತ ಆವಾಜ್ ಹಾಕೋಕೆ ಧೈರ್ಯ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯರಿಗೆ ಒಂದು ನೋಟೀಸು ಕೊಡೋ ಧೈರ್ಯನೂ ಡಿಸಿಎಂ
ಡಿ.ಕೆ.ಶಿವಕುಮಾರ್’ಗೆ ಇಲ್ಲವೇ ಎಂದು ಅಶೋಕ್ ಸಾಮಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

‘ಎಲ್ಲದಕ್ಕೂ ಡೆಲ್ಲಿ ಹೈಕಮಾಂಡ್ ಕಡೆ ಮುಖ ಮಾಡುವ ನೀವು ನಾಳೆ ಅಪ್ಪಿ ತಪ್ಪಿ ಮುಖ್ಯಮಂತ್ರಿ ಆದರೆ ರಾಜ್ಯವನ್ನು ಹೇಗೆ ಮುನ್ನಡೆಸುತ್ತೀರಿ ಡಿ.ಕೆ.ಶಿವಕುಮಾರ್ ಅವರೇ?’ ಎಂದು ‘X’ನಲ್ಲಿ ಪ್ರಶ್ನಿಸಿರುವ ಅಶೋಕ್, ದಿವಂಗತ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆಗಿದ್ದರೂ ಸೋನಿಯಾ ಗಾಂಧಿ ಅವರೇ ತಮ್ಮ ಕೈಯಲ್ಲಿ ಕೀಲಿ ಇಟ್ಟುಕೊಂಡಿದ್ದಂತೆ, ಅಕಸ್ಮಾತ್ ತಾವು ಮುಖ್ಯಮಂತ್ರಿ ಆದರೂ ಸಿದ್ದರಾಮಯ್ಯನವರೇ ಸೂಪರ್ ಸಿಎಂ ಆಗಿ ಉಳಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ತಮ್ಮಂತಹ ದುರ್ಬಲ ನಾಯಕರು ರಾಜ್ಯದ ಮುಖ್ಯಮಂತ್ರಿ ಆದರೆ ಕನ್ನಡಿಗರಿಗೆ ಏನು ಪ್ರಯೋಜನ? ಎಂದು ಪರ್ಸಾನಿಸಿದ್ದಾರೆ.

Leave a Reply

Your email address will not be published. Required fields are marked *