ಟಿಬೆಟ್‌ನ ಸಂಸ್ಕೃತಿ ಬದಲಿಸಲು ಚೀನಾ ಯತ್ನ: ಪೆನ್ಪಾ ತ್ಸೆರಿಂಗ್ ಆರೋಪ

0
Tibet

ನವದೆಹಲಿ: ಟಿಬೆಟ್‌ನ ಭಾಷೆ, ಧರ್ಮ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಬದಲಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಟಿಬೆಟಿಯನ್ ನಾಯಕ ಪೆನ್ಪಾ ತ್ಸೆರಿಂಗ್ ಆರೋಪಿಸಿದ್ದಾರೆ.

ಟಿಬೆಟಿಯನ್ ಭಾಷೆಯ ಬದಲಿಗೆ ಮ್ಯಾಂಡರಿನ್‌ಗೆ ಆದ್ಯತೆ ನೀಡಲಾಗುತ್ತಿದ್ದು, ನಾಲ್ಕು ವರ್ಷದ ಮಕ್ಕಳನ್ನೂ ವಸತಿ ಶಾಲೆಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಮಕ್ಕಳು ಮಾತೃಭಾಷೆ ಮತ್ತು ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಸಂಸ್ಥೆಗಳ ಮೇಲೂ ಕಮ್ಯುನಿಸ್ಟ್ ಪಕ್ಷದ ನಿಷ್ಠೆ ಪ್ರದರ್ಶಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದಾರೆ. ಟಿಬೆಟಿಯನ್ ನಿರಾಶ್ರಿತರಿಗೆ ಶಿಕ್ಷಣ ಮತ್ತು ಮಾನವೀಯ ನೆರವು ನೀಡುತ್ತಿರುವ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಟಿಬೆಟ್‌ಗೆ ಬೆಂಬಲ ನೀಡುವುದು ನ್ಯಾಯ ಮತ್ತು ಸತ್ಯಕ್ಕೆ ಬೆಂಬಲ ನೀಡಿದಂತೆ ಎಂದಿದ್ದಾರೆ.

ಚೀನಾದ ವಿರುದ್ಧ ಸಶಸ್ತ್ರ ಹೋರಾಟ ನಡೆಸದೆ, ಮಾತುಕತೆಯ ಮೂಲಕ ಚೀನಾದ ಚೌಕಟ್ಟಿನೊಳಗೆ ಅರ್ಥಪೂರ್ಣ ಸ್ವಾಯತ್ತತೆ ಪಡೆಯುವುದೇ ತಮ್ಮ ‘ಮಿಡಲ್ ವೇ’ ನೀತಿಯ ಉದ್ದೇಶ ಎಂದು ಪೆನ್ಪಾ ತ್ಸೆರಿಂಗ್ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *