UK PM -Mark Carney

ಒಟ್ಟಾವಾ: ಕೆನಡಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (CBC) ಚುನಾವಣೆಯಲ್ಲಿ ಆಡಳಿತಾರೂಢ ಲಿಬರಲ್ ಪಾರ್ಟಿ ಆಫ್ ಕೆನಡಾ ಮೇಲುಗೈ ಸಾಧಿಸಿದೆ.

“ಲಿಬರಲ್‌ಗಳು ಸತತ ನಾಲ್ಕನೇ ಸರ್ಕಾರವನ್ನು ರಚಿಸುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲಂಡನ್ನಿನ ಸ್ಥಳೀಯ ಕಾಲಮಾನ ರಾತ್ರಿ 10:30 ರ ಹೊತ್ತಿಗೆ ಫಲಿತಾಂಶಗಳನ್ನು ಘೋಷಿಸಲಾದ 65 ಸ್ಥಾನಗಳಲ್ಲಿ 33 ಸ್ಥಾನಗಳನ್ನು ಲಿಬರಲ್ ಪಕ್ಷ ವಶಪಡಿಸಿಕೊಂಡಿತ್ತು. ಅನಂತರದಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗಿದೆ. ಖಲಿಸ್ತಾನ್ ಬೆಂಬಲಿಗ ಎಂದು ಹೇಳಲಾದ ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿ ರಾತ್ರಿವರೆಗೂ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ ಆದರೆ ಐದರಲ್ಲಿ ಮುನ್ನಡೆ ಸಾಧಿಸಿತ್ತು.

ಲಿಬರಲ್ ಪಕ್ಷ ಗೆದ್ದರೆ, ಜಸ್ಟಿನ್ ಟ್ರುಡೊ ಬದಲಿಗೆ ಬಂದ ಮಾರ್ಕ್ ಕಾರ್ನಿ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ನಡುವೆ, ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದ ಮೇಲೆ ಸುಂಕದ ಯುದ್ಧವನ್ನು ಘೋಷಿಸಿ ಅದನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆ ಹಾಕಿದ ಪರಿಣಾಮವಾಗಿ ಲಿಬರಲ್ ಪಕ್ಷಕ್ಕೆ ಹೊಸ ಜೀವ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published. Required fields are marked *