ಕಬ್ಬನ್ ಪಾರ್ಕ್ ತಾಂತ್ರಿಕ ದೋಷ ಸರಿಪಡಿಕೆ: ನೇರಳೆ ಮಾರ್ಗದ ಮೆಟ್ರೋ ಸಂಚಾರ ಯಥಾಸ್ಥಿತಿಗೆ

0
Metro-Rail-Bengaluru-300x202-1

ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ (ಕಾಡುಗೋಡಿಯಿಂದ ಚಲ್ಲಘಟ್ಟ) ರೈಲು ಸಂಚಾರ ಸಂಪೂರ್ಣವಾಗಿ ಪುನರಾರಂಭಗೊಂಡಿದ್ದು, ಪ್ರಯಾಣಿಕರ ಆತಂಕಕ್ಕೆ ತೆರೆ ಬಿದ್ದಿದೆ.

ಮಂಗಳವಾರ ಸಂಜೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ‘ಥರ್ಡ್ ರೈಲ್ ಸಿಸ್ಟಮ್’ನ ಕರೆಂಟ್ ಕಲೆಕ್ಟರ್ ಶೂನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಮೆಜೆಸ್ಟಿಕ್ ಮತ್ತು ಎಂ.ಜಿ. ರಸ್ತೆ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.

ಬಿಎಂಆರ್‌ಸಿಎಲ್ ತಾಂತ್ರಿಕ ತಂಡಗಳು ರಾತ್ರಿಯಿಡೀ ದುರಸ್ತಿ ಕಾರ್ಯ ನಡೆಸಿ, ಬುಧವಾರ ಮುಂಜಾನೆ 3:30ರ ವೇಳೆಗೆ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿವೆ.

ಇದಾದ ಬಳಿಕ ನಿಗದಿತ ವೇಳಾಪಟ್ಟಿಯಂತೆ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದ್ದು, ಕಾಡುಗೋಡಿಯಿಂದ ಚಲ್ಲಘಟ್ಟದವರೆಗಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಯಾವುದೇ ವ್ಯತ್ಯಯವಿಲ್ಲದೆ ಸೇವೆ ಮುಂದುವರಿದಿದೆ.

ಕಚೇರಿ ಹಾಗೂ ದೈನಂದಿನ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ಇದೀಗ ನಿರಾತಂಕವಾಗಿ ಮೆಟ್ರೋ ಸೇವೆಯನ್ನು ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *