ಒಂದು ವಾರದಲ್ಲಿ ಉಕ್ರೇನ್ ಮೇಲೆ 2,300ಕ್ಕೂ ಹೆಚ್ಚು ಡ್ರೋನ್, 1,590 ಬಾಂಬ್ ದಾಳಿ: ಝೆಲೆನ್ಸ್ಕಿ

0
Ukrain

ಕೈವ್: ಕಳೆದ ಒಂದು ವಾರದಲ್ಲಿ ರಷ್ಯಾ ಉಕ್ರೇನ್ ಮೇಲೆ 2,300ಕ್ಕೂ ಹೆಚ್ಚು ದಾಳಿ ಡ್ರೋನ್‌ಗಳು, 1,590 ವೈಮಾನಿಕ ಬಾಂಬ್‌ಗಳು ಮತ್ತು 15 ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇಂಧನ ಮೂಲಸೌಕರ್ಯದ ಮೇಲಿನ ನಿರಂತರ ದಾಳಿಗಳು ಚಳಿಗಾಲದ ಸಿದ್ಧತೆಗೆ ಅಪಾಯ ತಂದೊಡ್ಡಬಹುದು ಎಂದು ಎಚ್ಚರಿಸಿದ್ದಾರೆ.

ಜಪೋರಿಝಿಯಾ, ಸುಮಿ, ಒಡೆಸಾ, ಝೈಟೊಮಿರ್ ಮತ್ತು ಕಿರೊವೊಹ್ರಾಡ್ ಪ್ರದೇಶಗಳ ಇಂಧನ ಸೌಲಭ್ಯಗಳನ್ನು ರಷ್ಯಾ ಗುರಿಯಾಗಿಸಿಕೊಂಡಿದೆ. ಡ್ನಿಪ್ರೊ, ಖಾರ್ಕಿವ್ ಮತ್ತು ಜಪೋರಿಝಿಯಾದ ರೈಲ್ವೆ ಮೂಲಸೌಕರ್ಯಕ್ಕೂ ಹಾನಿಯಾಗಿದೆ. ಡೊನೆಟ್ಸ್ಕ್ ಮತ್ತು ಕೈವ್ ಪ್ರದೇಶಗಳಲ್ಲೂ ದಾಳಿಗಳು ನಡೆದಿದ್ದು, ಕನಿಷ್ಠ 16 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಬ್‌ಸ್ಟೇಷನ್‌ಗಳನ್ನು ಗುರಿಯಾಗಿಸಲು ರಷ್ಯಾ ಶಹೀದ್ ಡ್ರೋನ್‌ಗಳನ್ನು ಬಳಸುತ್ತಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ. ಗಂಟೆಗೆ 161 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಾಗುವ ಡ್ರೋನ್‌ಗಳೊಂದಿಗೆ ಸಂಪರ್ಕ ಕಡಿತಗೊಳ್ಳುವುದರಿಂದ ಅವುಗಳನ್ನು ತಡೆಯಲು ಉಕ್ರೇನ್‌ಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.

ಸ್ಟಾರ್‌ಶೀಲ್ಡ್ ಟರ್ಮಿನಲ್‌ಗಳ ವೇಗ ನಿರ್ಬಂಧಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿರುವ ಅವರು, ಚಳಿಗಾಲದ ಮೊದಲು ಇಂಧನ ಮೂಲಸೌಕರ್ಯ ಮತ್ತು ಜನರ ಸುರಕ್ಷತೆ ಕಾಪಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *