ಏಷ್ಯನ್ ಪ್ಯಾರಾ ಗೇಮ್ಸ್: ಎರಡನೇ ದಿನವೂ ಭಾರತದ ಪದಕ ಬೇಟೆ ಮುಂದುವರಿಕೆ

ಐಚಿ-ನಗೋಯಾ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಎರಡನೇ ದಿನವೂ ಮುಂದುವರಿದಿದೆ. ಮೊದಲ ದಿನ 11 ಪದಕಗಳನ್ನು ಗೆದ್ದಿದ್ದ ಭಾರತ, ಎರಡನೇ ದಿನವೂ ಅಥ್ಲೆಟಿಕ್ಸ್, ಶೂಟಿಂಗ್, ಪ್ಯಾರಾ ಪವರ್‌ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಈಜು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ದೇವೇಂದರ್ ಕುಮಾರ್ ಚಿನ್ನ, ರಾಕೇಶ್ ಬೆಳ್ಳಿ ಹಾಗೂ ಪ್ರದೀಪ್ ಕುಮಾರ್ ಕಂಚಿನ ಪದಕ ಗೆದ್ದರು. ಪುರುಷರ F51/52/53 ವಿಭಾಗದಲ್ಲಿ ಪ್ರಣವ್ ಸೂರ್ಮಾ ಚಿನ್ನದ ಸಾಧನೆ ಮಾಡಿದರೆ, ರಾಮ್ ರತನ್ ಸಿಂಗ್ ಬೆಳ್ಳಿ ಪದಕ ಪಡೆದರು. ಪುರುಷರ ಹೈಜಂಪ್‌ನಲ್ಲಿ ನಿಶಾದ್ ಕುಮಾರ್ ಚಿನ್ನ ಗೆದ್ದರು.

ಮಹಿಳೆಯರ 200 ಮೀಟರ್ T12 ಓಟದಲ್ಲಿ ಸಿಮ್ರನ್ ಚಿನ್ನದ ಪದಕ ಪಡೆದರು. 400 ಮೀಟರ್ T20 ವಿಭಾಗದಲ್ಲಿ ದೀಪ್ತಿ ಜೀವಾಂಜಿ ಚಿನ್ನ ಗೆದ್ದರೆ, ತೇಜಲ್‌ಬೆನ್ ದಾಮೋರ್ 200 ಮೀಟರ್ ಓಟದಲ್ಲಿ ಕಂಚು ಹಾಗೂ ಪ್ರೀತಿ ಪಾಲ್ ಮಹಿಳೆಯರ 200 ಮೀಟರ್ T35 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.
ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಅಶೋಕ್ ಬೆಳ್ಳಿ ಪದಕ ಪಡೆದರು. ಪುರುಷರ 10 ಮೀಟರ್ ಏರ್ ಪಿಸ್ತೂಲ್ SH1 ವಿಭಾಗದಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಗೆದ್ದರೆ, ಮಹಿಳೆಯರ ವಿಭಾಗದಲ್ಲಿ ಸೃಷ್ಟಿ ಅರೋರಾ ಕಂಚು ಪಡೆದರು. ಜಾವೆಲಿನ್ ಥ್ರೋನಲ್ಲಿ ಪ್ರದೀಪ್ ಕುಮಾರ್ ಬೆಳ್ಳಿ ಹಾಗೂ ಆಯುಷ್ ವರ್ಮಾ ಕಂಚು ಗೆದ್ದರು. ಶಾಟ್‌ಪುಟ್‌ನಲ್ಲಿ ಪ್ರವೀಣ್ ಶರ್ಮಾ ಮತ್ತು ಹೊಕಾಟೊ ಹೊಟೊಝೆ ಸೆಮಾ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.
ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಸೋನಲ್‌ಬೆನ್ ಪಟೇಲ್, ಭಾವಿನಾ ಪಟೇಲ್, ಪ್ರಾಚಿ ಪಾಂಡೆ, ಸಹನಾ ರವಿ ಹಾಗೂ ಪುರುಷರ ವಿಭಾಗದಲ್ಲಿ ಜೆಹಾನ್ ಮದನ್ ಕಂಚಿನ ಪದಕ ಗೆದ್ದರು. ಪ್ಯಾರಾ ಈಜಿನಲ್ಲಿ 400 ಮೀಟರ್ ಫ್ರೀಸ್ಟೈಲ್‌ನಲ್ಲಿ ಹಿಮಾಂಶು ನಂದಲ್ ಹಾಗೂ 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ನಿರಂಜನ್ ಮುಕುಂದನ್ ಕಂಚು ಪಡೆದರು.
