ಏಷ್ಯನ್ ಗೇಮ್ಸ್’ನಲ್ಲಿ ಭಾರತದ ಮುಂದುವರಿದ ಸ್ವರ್ಣ ಬೇಟೆ

ಬೀಜಿಂಗ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್’ನಲ್ಲಿ ಭಾರತ ಮತ್ತೊಂದು ಚಿನ್ನ ಗೆದ್ದಿದೆ. ಭಾನುವಾರ ಪುರುಷರ ಷಾಟ್ ಪಟ್ ವಿಭಾಗದಲ್ಲಿ ಭಾರತದ ತಜಿಂದರ್ ಪಾಲ್ ಸಿಂಗ್ ತೂರ್ ಸ್ವರ್ಣ ಗೆದ್ದಿದ್ದಾರೆ.

ಅಂತಿಮ ಪಂದ್ಯದಲ್ಲಿ 20.36 ಮೀಟರ್ ದೂರ ಎಸೆಯುವ ಮೂಲಕ ತಜೇಂದರ್ ಪಾಲ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಇದೇ ವೇಳೆ, ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಚಿನ್ನದ ಪದಕ ಗೆದ್ದಿದ್ದಾರೆ.