‘ಅವರೊಂದಿಗಿನ ಬಾಂಧವ್ಯ ಕ್ರಿಕೆಟ್‌ಗಿಂತ ಮಿಗಿಲಾದುದು’; ಧೋನಿಗೆ ರೈನಾ ಭಾವನಾತ್ಮಕ ಗೌರವ

0
Cricketer-Suresh-Raina-MS-Dhoni

ಚೆನ್ನೈ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಎಂಎಸ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾರ್ಗದರ್ಶಕರಾಗಿ ಸ್ವಾಗತಿಸಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರೈನಾ, ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ದಿನಗಳಿಂದ ಟ್ರೋಫಿ ಗೆದ್ದ ಕ್ಷಣಗಳವರೆಗೆ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ. ಧೋನಿ ಅವರೊಂದಿಗಿನ ಬಾಂಧವ್ಯ ಕ್ರಿಕೆಟ್‌ಗಿಂತ ಮಿಗಿಲಾದುದು ಎಂದು ಹೇಳಿದ್ದಾರೆ.

“ನಂಬರ್ 7 ಜೆರ್ಸಿ ಇನ್ನು ಮೈದಾನದಲ್ಲಿ ಕಾಣಿಸಿಕೊಳ್ಳದಿರಬಹುದು. ಆದರೆ ನಿಮ್ಮ ಪರಂಪರೆ ಸದಾ ಚೆಪಾಕ್‌ನ ಹೃದಯಬಡಿತವಾಗಿರುತ್ತದೆ” ಎಂದು ರೈನಾ ಬರೆದಿದ್ದಾರೆ.

ಧೋನಿ ಅವರ ಶಾಂತ ಮನೋಭಾವ, ನಿರ್ಭೀತ ವ್ಯಕ್ತಿತ್ವ ಮತ್ತು ಅನುಭವ ಹೊಸ ಜವಾಬ್ದಾರಿಯಲ್ಲೂ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದಿದ್ದಾರೆ.

“ಮೈದಾನದಲ್ಲಿ ನಮ್ಮನ್ನು ಮುನ್ನಡೆಸುವುದರಿಂದ ಹಿಡಿದು ಪಕ್ಕದಲ್ಲಿ ನಿಂತು ಮಾರ್ಗದರ್ಶನ ಮಾಡುವವರೆಗೆ, ನೀವು ಸದಾ ನಮ್ಮ ಥಳ ಆಗಿರುತ್ತೀರಿ. ಪಾತ್ರ ಬದಲಾಗಬಹುದು, ಪರಂಪರೆ ಬದಲಾಗುವುದಿಲ್ಲ. ಒಮ್ಮೆ ನಾಯಕನಾದರೆ, ಎಂದೆಂದಿಗೂ ನಮ್ಮ ಥಳ” ಎಂದು ರೈನಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *