ಅನಿಶ್-ಅನಸ್ವರ ರಾಜನ್ ಅಭಿನಯದ ‘ಇಟ್ಲು ಅರ್ಜುನಾ’ ನವೆಂಬರ್ 13ರಂದು ಬಿಡುಗಡೆ

0
Itlu-Arjuna-movie

ಹೈದರಾಬಾದ್: ಅನಿಶ್ ಮತ್ತು ಅನಸ್ವರ ರಾಜನ್ ಅಭಿನಯದ ‘ಇಟ್ಲು ಅರ್ಜುನಾ’ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಈ ರೊಮ್ಯಾಂಟಿಕ್ ಎಂಟರ್‌ಟೈನರ್ ನವೆಂಬರ್ 13ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಅಕ್ಟೋಬರ್ 30ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಮುಂದೂಡಲಾಗಿದೆ.

ನಾಗಾರ್ಜುನ ಅರ್ಪಿಸುವ ಚಿತ್ರವನ್ನು ವೆಂಕಿ ಕುಡುಮುಲ ವಾಟ್ ನೆಕ್ಸ್ಟ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಅನಿಶ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಅನಸ್ವರ ರಾಜನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಹೇಶ್ ಉಪ್ಪಾಲ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಚಿತ್ರದಲ್ಲಿ ಅನಿಶ್ ಮಾತು ಮತ್ತು ಶ್ರವಣ ದೋಷ ಹೊಂದಿರುವ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಚಿತ್ರದ ಟೈಟಲ್ ಗ್ಲಿಂಪ್ಸ್ ಹಾಗೂ ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಚಾರದ ವಿಡಿಯೊಗಳಲ್ಲಿ ನಾಯಕ ಜೋಡಿಯ ಕೆಮಿಸ್ಟ್ರಿ ಗಮನ ಸೆಳೆದಿದೆ.

ಎಸ್. ತಮನ್ ಸಂಗೀತ, ರಾಜಾ ಮಹದೇವ್ ಛಾಯಾಗ್ರಹಣ, ಕೋಟಿ ಕೆ ಸಂಕಲನ ಹಾಗೂ ದಿಲೀಪ್ ಸುಬ್ಬರಾಯನ್ ಸಾಹಸ ದೃಶ್ಯಗಳ ಸಂಯೋಜನೆ ಚಿತ್ರಕ್ಕಿದೆ.

Leave a Reply

Your email address will not be published. Required fields are marked *