ಸ್ಟಾರ್‌ಲಿಂಕ್ ವೇಗ ಮಿತಿಗೆ ಅಮೆರಿಕದ ಸ್ಪಷ್ಟನೆ ಕೋರಿದ ಝೆಲೆನ್ಸ್ಕಿ

0
Volodymyr-Zelenskyy-President-of-Ukraine-1-1

ಕೈವ್: ಸ್ಟಾರ್‌ಲಿಂಕ್ ಸೇವೆಗಳ ಮೇಲೆ ವಿಧಿಸಲಾಗಿದೆ ಎನ್ನಲಾದ ವೇಗದ ನಿರ್ಬಂಧಗಳ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಸರ್ಕಾರ ಹಾಗೂ ಸ್ಪೇಸ್‌ಎಕ್ಸ್‌ನಿಂದ ಸ್ಪಷ್ಟನೆ ಕೋರಿದ್ದಾರೆ. ಈ ನಿರ್ಬಂಧಗಳು ರಷ್ಯಾದ ವೇಗದ ಶಾಹೆದ್ ಡ್ರೋನ್‌ಗಳನ್ನು ತಡೆಯುವ ಉಕ್ರೇನ್‌ನ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಮುಂಚೂಣಿ ಪ್ರದೇಶಗಳು ಮತ್ತು ರಷ್ಯಾ ಆಕ್ರಮಿತ ಉಕ್ರೇನ್ ಭಾಗಗಳಲ್ಲಿ ಗಂಟೆಗೆ 161 ಕಿ.ಮೀ. ವೇಗದ ಮಿತಿ ಜಾರಿಯಲ್ಲಿದೆ ಎಂಬ ವರದಿಗಳ ಕುರಿತು ಝೆಲೆನ್ಸ್ಕಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಿತಿಯಿಂದ ವೇಗವಾಗಿ ಚಲಿಸುವ ಡ್ರೋನ್‌ಗಳನ್ನು ಹೊಡೆದುರುಳಿಸಲು ಬಳಸುವ ಇಂಟರ್‌ಸೆಪ್ಟರ್ ವ್ಯವಸ್ಥೆಗಳ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಅಮೆರಿಕದ ವಿದೇಶಾಂಗ ಇಲಾಖೆ, ಪೆಂಟಗನ್ ಮತ್ತು ಸ್ಪೇಸ್‌ಎಕ್ಸ್ ಜೊತೆ ತುರ್ತು ಸಂಪರ್ಕ ಸಾಧಿಸಿ ಸಮಸ್ಯೆ ಪರಿಹರಿಸುವಂತೆ ಉಕ್ರೇನ್‌ನ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳಿಗೆ ಸೂಚಿಸಿದ್ದಾರೆ.

ಇದೇ ವೇಳೆ, ಸುಮಿ ಮತ್ತು ಕೈವ್ ಪ್ರದೇಶಗಳಲ್ಲಿ ರಷ್ಯಾ ದಾಳಿಯಿಂದ ಹಾನಿಗೊಳಗಾದ ಶೋಸ್ಟ್ಕಾ, ಕೊನೊಟಾಪ್, ಬಿಲಾ ತ್ಸೆರ್ಕ್ವಾ ಹಾಗೂ ಬ್ರೋವರಿ ನಗರಗಳ ಪುನಃಸ್ಥಾಪನಾ ಕಾರ್ಯಗಳನ್ನೂ ಅವರು ಪರಿಶೀಲಿಸಿದ್ದಾರೆ. ಪರಿಹಾರ ಕಾರ್ಯಗಳ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಧನ ಮೂಲಸೌಕರ್ಯ, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಪ್ರಮುಖ ಕೃಷಿ ಕೇಂದ್ರಗಳ ರಕ್ಷಣೆಗೆ ವಾಯು ರಕ್ಷಣಾ ವ್ಯವಸ್ಥೆ ಬಲಪಡಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಉಕ್ರೇನ್ ಹೊಸ ರಕ್ಷಣಾ ಪ್ಯಾಕೇಜ್‌ಗಳನ್ನು ಸಿದ್ಧಪಡಿಸುತ್ತಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *