ಸೌದಿ ವಿಮಾನ ನಿಲ್ದಾಣ, ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆಸಿದ ಹೌತಿಗಳ ಹೇಳಿಕೆ

0
Soudi-houthi-yeman-1

ಸನಾ: ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣ ಮತ್ತು ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿರುವುದಾಗಿ ಯೆಮನ್‌ನ ಹೌತಿ ಬಂಡುಕೋರರು ಹೇಳಿಕೊಂಡಿದ್ದಾರೆ.

ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒಂದು ಡ್ರೋನ್ ಹಾಗೂ ಪೂರ್ವ-ಪಶ್ಚಿಮ ತೈಲ ಪೈಪ್‌ಲೈನ್‌ನ ಪಂಪಿಂಗ್ ಸ್ಟೇಷನ್ ನಂ. 3 ಮೇಲೆ ಎರಡು ಡ್ರೋನ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಹೌತಿ ವಕ್ತಾರ ಯಾಹ್ಯಾ ಸರಿಯಾ ತಿಳಿಸಿದ್ದಾರೆ. ಜಿಜಾನ್ ಪ್ರದೇಶದ ಅಲ್-ತುವಾಲ್‌ನಲ್ಲಿ ಸೌದಿ ಪಡೆಗಳ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು, ಡಜನ್‌ಗಟ್ಟಲೆ ಸೈನಿಕರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಲ್-ಜೌಫ್, ಲಹ್ಜ್ ಪ್ರಾಂತ್ಯಗಳು ಹಾಗೂ ಅಡೆನ್‌ನ ರಾಸ್ ಅಬಾಸ್ ಸೇನಾ ನೆಲೆಯಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹಾಗಾರಗಳ ಮೇಲೂ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿವೆ.

Leave a Reply

Your email address will not be published. Required fields are marked *