ಭಾರತ–ಐಸಿಟಿಪಿ ಸಹಕಾರ ನಿಧಿ ಸ್ಥಾಪನೆ: ಭಾರತೀಯ ಸಂಶೋಧಕರಿಗೆ ಜಾಗತಿಕ ಅವಕಾಶ ವಿಸ್ತರಣೆ

0
India-Italy-Based-ICTP-Set-Up-Cooperation-Fund-to-Boost-Research-Opportunities

ನವದೆಹಲಿ: ವೈಜ್ಞಾನಿಕ ಸಹಯೋಗ ಬಲಪಡಿಸುವ ಹಾಗೂ ಭಾರತೀಯ ಸಂಶೋಧಕರು, ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಭಾರತ ಮತ್ತು ಇಟಲಿ ಮೂಲದ ಅಂತರರಾಷ್ಟ್ರೀಯ ಸೈದ್ಧಾಂತಿಕ ಭೌತಶಾಸ್ತ್ರ ಕೇಂದ್ರ (ಐಸಿಟಿಪಿ) ಜಂಟಿಯಾಗಿ ಸಹಕಾರ ನಿಧಿ ಆರಂಭಿಸಿವೆ.

ಇಟಲಿಯ ಟ್ರೈಸ್ಟೆಯಲ್ಲಿರುವ ಐಸಿಟಿಪಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಭೇಟಿ ನೀಡಿದ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಹಾಗೂ ಐಸಿಟಿಪಿ ನಡುವೆ ಉದ್ದೇಶ ಪತ್ರಕ್ಕೆ ಸಹಿ ಹಾಕಲಾಯಿತು. ಬಳಿಕ ‘ಭಾರತ–ಐಸಿಟಿಪಿ ಸಹಕಾರ ನಿಧಿ’ ಆರಂಭಿಸಲಾಯಿತು.

ಡಿಎಸ್‌ಟಿಯ ಅಂತರರಾಷ್ಟ್ರೀಯ ಸಹಕಾರ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್‌ಕುಮಾರ್ ಸೋಮಸುಂದರಂ ಭಾರತದ ಪರವಾಗಿ ಉದ್ದೇಶ ಪತ್ರ ವಿನಿಮಯ ಮಾಡಿಕೊಂಡರು.

ಈ ಉಪಕ್ರಮವು ಜಂಟಿ ಸಂಶೋಧನೆ, ಶೈಕ್ಷಣಿಕ ವಿನಿಮಯ, ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಭೌತಶಾಸ್ತ್ರ, ಗಣಿತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿರುವ ಐಸಿಟಿಪಿಯ ಭೇಟಿ ಫೆಲೋಶಿಪ್, ಡಿಪ್ಲೊಮಾ ಮತ್ತು ಪೋಸ್ಟ್‌ಡಾಕ್ಟರಲ್ ಅವಕಾಶಗಳಿಂದ ಭಾರತೀಯ ಸಂಶೋಧಕರು ಪ್ರಯೋಜನ ಪಡೆಯಲಿದ್ದಾರೆ. ಡಿಎಸ್‌ಟಿ, ಸಿಎಸ್‌ಐಆರ್, ವಿಶ್ವವಿದ್ಯಾಲಯಗಳು ಮತ್ತು ಐಐಟಿಗಳ ಸಹಭಾಗಿತ್ವಕ್ಕೂ ಈ ನಿಧಿ ನೆರವಾಗಲಿದೆ.

Leave a Reply

Your email address will not be published. Required fields are marked *