ರನ್ಯಾ ಚಿನ್ನದ ಕಳ್ಳಸಾಗಣೆ ಸಿಎಂ ಸಿದ್ದರಾಮಯ್ಯ ಮನೆ ಬಾಗಿಲಿಗೆ ತಲುಪಿತೇ? ಅಮಿತ್ ಮಾಳವೀಯ ಪೋಸ್ಟ್

0
Ranya Case - Siddaramaiah

ಬೆಂಗಳೂರು: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಕಳ್ಳಸಾಗಾಣಿಕೆ ಆರೋಪ ಪ್ರಕರಣ ರಾಜ್ಯ ರಾಜಕಾರಣದಲ್ಲೂ ತಲ್ಲಣ ಸೃಷ್ಟಿಸಿದೆ. ದುಬೈನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಹೊತ್ತು ತಂದ ಆರೋಪದಲ್ಲಿ ನಟಿ ರನ್ಯಾ ರಾವ್ ಬಂಧನವಾಗಿದೆ. ಈ ಸ್ಮಗ್ಲಿಂಗ್ ಕೇಸ್ ಕುರಿತಂತೆ DRI, CBI ತನಿಖೆ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿಗಳ ಶಾಮೀಲು ಬಗ್ಗೆಯೂ ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ.

ಇನ್ನೊಂದೆಡೆ ರಮ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್’ನಲ್ಲಿ ರಾಜ್ಯದ ಸಚಿವರಿಬ್ಬರ ಕೈವಾಡ ಇರುವ ಬಗ್ಗೆ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡುತ್ತಿದ್ದು ಈ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ನಾಯಕರ ನಡುವೆ ವಾಕ್ಸಮರ ನಡೆದಿದೆ.

ಕೆಜಿಎಫ್..?

ಈ ಮಧ್ಯೆ, ಕರ್ನಾಟಕದಲ್ಲಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೆ ತಲುಪಿದೆ ಎಂದು ಬಿಜೆಪಿ ಬಿಜೆಪಿ ನಾಯಕ ಬೆಂಗಳೂರು: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಕಳ್ಳಸಾಗಾಣಿಕೆ ಆರೋಪ ಪ್ರಕರಣ ರಾಜ್ಯ ರಾಜಕಾರಣದಲ್ಲೂ ತಲ್ಲಣ ಸೃಷ್ಟಿಸಿದೆ. ದುಬೈನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಹೊತ್ತು ತಂದ ಆರೋಪದಲ್ಲಿ ನಟಿ ರನ್ಯಾ ರಾವ್ ಬಂಧನವಾಗಿದೆ. ಈ ಸ್ಮಗ್ಲಿಂಗ್ ಕೇಸ್ ಕುರಿತಂತೆ DRI, CBI ತನಿಖೆ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿಗಳ ಶಾಮೀಲು ಬಗ್ಗೆಯೂ ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ.

ಇನ್ನೊಂದೆಡೆ ರಮ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್’ನಲ್ಲಿ ರಾಜ್ಯದ ಸಚಿವರಿಬ್ಬರ ಕೈವಾಡ ಇರುವ ಬಗ್ಗೆ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡುತ್ತಿದ್ದು ಈ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ನಾಯಕರ ನಡುವೆ ವಾಕ್ಸಮರ ನಡೆದಿದೆ.

ಕೆಜಿಎಫ್..?

ಈ ಮಧ್ಯೆ, ಕರ್ನಾಟಕದಲ್ಲಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೆ ತಲುಪಿದೆ ಎಂದು ಬಿಜೆಪಿ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.

‘ಕಾಂಗ್ರೆಸ್ ಗೋಲ್ಡ್ ಫೀಲ್ಡ್’ (#CongressGoldField) ಎಂಬ ಹ್ಯಾಷ್ ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣ ‘X’ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ಜೊತೆ ಗೋಲ್ಡ್ ಸ್ಮಗ್ಲಿಂಗ್ ಚೆಲುವೆ ರನ್ಯಾ ರಾವ್ ನಿಂತಿದ್ದರೆನ್ನಲಾದ ಫೋಟೋವನ್ನು ಅಮಿತ್ ಮಾಳವಿಯಾ ಹಂಚಿಕೊಂಡಿದ್ದಾರೆ. ಈ ಹಳೆಯ ಫೋಟೋದಲ್ಲಿ ಹಾಲಿ ಗೃಹ ಸಚಿವ ಜಿ. ಪರಮೇಶ್ವರ ಅವರೂ ಇದ್ದಾರೆ.

‘ವಿಪರ್ಯಾಸವೆಂದರೆ, ಯಾವುದೇ ರಾಜಕೀಯ ಸಂಪರ್ಕಗಳನ್ನು ತಳ್ಳಿಹಾಕುತ್ತಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಕಾಂಗ್ರೆಸ್‌ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಎಂದು ಅಮಿತ್ ಮಾಳವಿಯಾ ಬರೆದುಕೊಂಡಿದ್ದಾರೆ.

ಅಮಿತ್ ಮಾಳವೀಯಗೆ ನೆಟ್ಟಿಗರ ಕ್ಲಾಸ್:

ಅಮಿತ್ ಮಾಳವೀಯ ಅವರ ಈ ಪೋಸ್ಟ್’ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಮೋದಿ ಸರ್ಕಾರದ ಮೂಗಿನ ನೇರಕ್ಕೆ ಕಳ್ಳಸಾಗಣೆ ಮಾಡಿದ್ದಾಳೆ. ವಿಮಾನ ನಿಲ್ದಾಣ ಮತ್ತು ವಲಸೆ ವಿಭಾಗಗಳು ಕೇಂದ್ರ ಸರ್ಕಾರದ ಬಳಿ ಇವೆ, ರಾಜ್ಯ ಸರ್ಕಾರದ ಬಳಿ ಇಲ್ಲ’ ಎಂದು ನೆಟ್ಟಿಗರು ಬೊಟ್ಟು ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಅಷ್ಟೇ ಅಲ್ಲ, ‘ಪೊಲೀಸ್ ಅಧಿಕಾರಿಯ ಸಂಬಂಧಿಕರ ಮದುವೆಗೆ ಹೋಗುವುದು ಅಪರಾಧವಲ್ಲ, ನಿಮ್ಮ ಪಕ್ಷದ ನಾಯಕರು ಕೂಡ ಹೋಗಿದ್ದರು ಮತ್ತು ನಿಮ್ಮ ಮಾಜಿ ಸಚಿವರು 40 ದಿನಗಳಲ್ಲಿ ಅವಳಿಗೆ ಭೂಮಿಯನ್ನು ನೀಡಿದ್ದಾಗಿ ದೃಢಪಡಿಸಿದರು. ಸಿದ್ದರಾಮಯ್ಯ ಅವರು ತೇಜಸ್ವಿ ಸೂರ್ಯರ ಮದುವೆಗೂ ಹೋಗಿದ್ದರು’ ಎಂದೂ ಮಾಳವೀಯರ ಪೋಸ್ಟ್’ಗೆ ನೆಟ್ಟಿಗರು ನೀಡಿರುವ ರಿಪ್ಲೈ ಕೂಡಾ ಗಮನಸೆಳೆದಿವೆ.

ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

You may have missed