ಮೋದಿಗೆ ‘ಸ್ಪೀಕರ್ ಆಫ್ ದಿ ನೆಸ್ಸೆಟ್’ ಪದಕ ಪ್ರದಾನ ಮಾಡಿದ ಇಸ್ರೇಲ್ ಸಂಸತ್

0
Narendra Modi 1

ಜೆರುಸಲೆಮ್: ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡರಿಂದಲೂ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾದ ಅಪರೂಪದ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರಾಗಿದ್ದಾರೆ. ಇದು ಪಶ್ಚಿಮ ಏಷ್ಯಾದಲ್ಲಿ ಭಾರತದ ಸಮತೋಲಿತ ಹಾಗೂ ತತ್ವಬದ್ಧ ರಾಜತಾಂತ್ರಿಕ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇಸ್ರೇಲ್ ಸಂಸತ್ತಾದ ನೆಸ್ಸೆಟ್ ಪ್ರಧಾನಿ ಮೋದಿಗೆ ‘ಸ್ಪೀಕರ್ ಆಫ್ ದಿ ನೆಸ್ಸೆಟ್’ ಪದಕ ಪ್ರದಾನ ಮಾಡಿದೆ. ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ ಅವರು ಪದಕ ನೀಡಿದರು. ಈ ಗೌರವಕ್ಕೆ ಭಾಜನರಾದ ಮೊದಲ ವ್ಯಕ್ತಿ ಮೋದಿ ಎನ್ನಲಾಗಿದೆ.

ಈ ಮನ್ನಣೆ ಭಾರತ–ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಿದ ಮೋದಿಯವರ ವೈಯಕ್ತಿಕ ನಾಯಕತ್ವವನ್ನು ಗುರುತಿಸುತ್ತದೆ. ರಕ್ಷಣಾ, ತಂತ್ರಜ್ಞಾನ, ಕೃಷಿ, ನವೀನತೆ ಹಾಗೂ ಆರ್ಥಿಕ ಸಹಕಾರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಗಾಢವಾಗಿಸಲು ಅವರು ನೀಡಿದ ಕೊಡುಗೆ ಉಲ್ಲೇಖಿಸಲಾಗಿದೆ.

2018ರಲ್ಲಿ ಮೋದಿ ಅವರಿಗೆ ಪ್ಯಾಲೆಸ್ಟೈನ್ ನೀಡುವ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕಾಲರ್ ಆಫ್ ದ ಸ್ಟೇಟ್ ಆಫ್ ಪ್ಯಾಲೆಸ್ಟೈನ್ ಪ್ರದಾನಿಸಲಾಗಿತ್ತು. ಇದು ಪ್ರದೇಶದಲ್ಲಿ ಭಾರತದ ಸಮತೋಲಿತ ರಾಜತಾಂತ್ರಿಕತೆಯ ಸಂಕೇತವೆಂದು ಪರಿಗಣಿಸಲಾಗಿದೆ.

ಭಾರತವು ಇಸ್ರೇಲ್‌ನೊಂದಿಗೆ ಬಹುಮುಖಿ ಸಂಬಂಧಗಳನ್ನು ವಿಸ್ತರಿಸುತ್ತಿರುವುದರ ಜೊತೆಗೆ, ಪ್ಯಾಲೆಸ್ಟೈನ್‌ಗೆ ಮಾನವೀಯ ಹಾಗೂ ಅಭಿವೃದ್ಧಿ ಸಹಾಯವನ್ನು ಮುಂದುವರಿಸಿದೆ. ಇಸ್ರೇಲ್–ಪ್ಯಾಲೆಸ್ಟೈನ್ ವಿವಾದಕ್ಕೆ ಸಂವಾದ ಮತ್ತು ಶಾಂತಿಯುತ ಪರಿಹಾರವೇ ಮಾರ್ಗ ಎಂಬ ನಿಲುವನ್ನು ನವದೆಹಲಿ ಪುನರುಚ್ಚರಿಸುತ್ತ ಬಂದಿದೆ.

Leave a Reply

Your email address will not be published. Required fields are marked *