ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು 4 ಸಾವಿರಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು 4 ಸಾವಿರಕ್ಕೆ ಏರಿಕೆಯಾಗಿವೆ. ಸೋಮವಾರದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,000ಕ್ಕೆ ತಲುಪಿದೆ.
ಕೇರಳದಲ್ಲಿ 1,435 ಸಕ್ರಿಯ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 506 ಸಕ್ರಿಯ ಪ್ರಕರಣಗಳು, ದೆಹಲಿಯಲ್ಲಿ 483 ಸಕ್ರಿಯ ಪ್ರಕರಣಗಳು, ಗುಜರಾತ್ ನಲ್ಲಿ 338 ಸಕ್ರಿಯ ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 331 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಕರ್ನಾಟಕದಲ್ಲಿ 253, ತಮಿಳುನಾಡಿನಲ್ಲಿ 189, ಉತ್ತರ ಪ್ರದೇಶದಲ್ಲಿ 157, ರಾಜಸ್ಥಾನದಲ್ಲಿ 69, ಪುದುಚೇರಿಯಲ್ಲಿ 41, ಮಧ್ಯಪ್ರದೇಶದಲ್ಲಿ 23, ಆಂಧ್ರಪ್ರದೇಶದಲ್ಲಿ 17, ಒಡಿಶಾದಲ್ಲಿ 12 ಸಕ್ರಿಯ ಪ್ರಕರಣಗಳು ಇವೆ ಎಂದು ಸರ್ಕಾರೀ ಮೂಲಗಳು ತಿಳಿಸಿವೆ.