ಪ್ರಯಾಗ್ ರಾಜ್ ಮಹಾಕುಂಭ ಮೇಳ: ಈ ವರೆಗೂ 35 ಕೋಟಿ ಆಸ್ತಿಕರಿಂದ ಪುಣ್ಯ ಸ್ನಾನ
ಪ್ರಯಾಗ್ ರಾಜ್: ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಈ ವರೆಗೂ ಸುಮಾರು 35 ಕೋಟಿ ಆಸ್ತಿಕರು ಸ್ನಾನ ಮಾಡಿದ್ದಾರೆ.
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ಕೋಟ್ಯಂತರ ಜನರು ಸಮಾಗಮವಾಗಿದ್ದು, ವಸಂತ ಪಂಚಮಿಯ ಅಮೃತ ಸ್ನಾನದ ಶುಭ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವು ಅಂಕಿ ಅಂಶ ಬಿಡುಗಡೆ ಮಾಡಿದೆ. ಮಹಾಕುಂಭ ಪ್ರಾರಂಭವಾದಾಗಿನಿಂದ ಈವರೆಗೂ 35 ಕೋಟಿಗೂ ಅಧಿಕ ಜನರು ಸ್ನಾನ ಮಾಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಇನ್ನೂ 23 ದಿನ ಮಹಾಕುಂಭ ಮೇಳ ನಡೆಯಲಿದ್ದು, 50 ಕೋಟಿ ಅಧಿಕ ಜನರು ಸ್ನಾನ ಮಾಡುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.