ಪಾಕ್ ಬೆಂಬಲಿಸಿದ ಟರ್ಕಿ ಜೊತೆಗಿನ ವಿಮಾನ ಒಪ್ಪಂದಕ್ಕೂ ಭಾರತ ಬ್ರೇಕ್

0
Plane- Airplane - Crash - Airport

ನವದೆಹಲಿ: ಆಪಲ್ ಸಹಿತ ಟರ್ಕಿಯ ಪ್ರಮುಖ ವಸ್ತುಗಳನ್ನು ಭಾರತೀಯರು ತಿರಸ್ಕರಿಸುವಂತೆಯೇ ಇದೀಗ ಆಯಾ ದೇಶದ ಜೊತೆ ವಿಮಾನಯಾನ ಸಹಕಾರವೂ ಸ್ಥಗಿತಗೊಳ್ಳಲಿದೆ. ಟರ್ಕಿಶ್‌ ಏರ್‌ಲೈನ್ಸ್‌ ಸಂಸ್ಥೆಯ ವಿಮಾನಗಳ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸುವ ಪ್ರಕ್ರಿಯೆ ಕೂಡಾ ಪಾಕ್ ಮಿತ್ರ ರಾಷ್ಟ್ರಕ್ಕೆ ಆಘಾತ ನೀಡಿದೆ.

ಟರ್ಕಿ ಮೂಲದ ಕಂಪನಿ ಜೊತೆಗಿನ ವಿಮಾನ ಗುತ್ತಿಗೆಯನ್ನು 3 ತಿಂಗಳೊಳಗೆ ರದ್ದುಗೊಳಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸರ್ಕಾರ ತಿಳಿಸಿದೆ.

ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಟರ್ಕಿ ದೇಶವು ಪಾಕಿಸ್ತಾನಕ್ಕೆ ನೆರವು ನೀಡಿತ್ತು. ಪಾಕಿಸ್ತಾನವನ್ನು ಬೆಂಬಲಿಸಿದ ಕಾರಣಕ್ಕಾಗಿ ಟರ್ಕಿ ಮೂಲದ ವಸ್ತುಗಳ ಆಮದನ್ನು ಭಾರತದ ವರ್ತಕರು ಸ್ಥಗಿತಗೊಳಿಸಿದರೆ. ಇದೀಗ ಟರ್ಕಿಶ್ ವಿಮಾನಯಾನ ಸಂಸ್ಥೆ ಜೊತೆಗಿನ ಒಪ್ಪಂದ ರದ್ದುಗೊಳಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಇಂಡಿಗೋ ವಿಮಾನಯಾನ ಸಂಸ್ಥೆಗೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

You may have missed