ಪಾಕಿಸ್ತಾನದ ಹುಡುಗನ ಜೊತೆ ನಟಿ ರಾಖಿ ಸಾವಂತ್ ವಿವಾಹ?

0
Rakhi Savanth 1

ಒಂದಿಲ್ಲೊಂದು ವಿವಾದಗಳ ಸುದ್ದಿಗಳಿಂದ ಗಮನಸೆಳೆಯುತ್ತಿರುವ ನಟಿ ರಾಖಿ ಸಾವಂತ್ ಅವರು ಇಡೀಗ್ಗ ಮತ್ತೊಂದು ಮದುವೆ ಪ್ರಸ್ತಾಪ ವಿಚಾರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ರಾಖಿ ಸಾವಂತ್ ಅವರು ಇದೀಗ ಮೂರನೇ ಬಾರಿಗೆ ಮದುವೆಯಾಯಾಗುವ ತಯಾರಿಯಲ್ಲಿದ್ದಾರೆ. ಈ ಬಾರಿ ಅವರು ಪಾಕಿಸ್ತಾನದ ಹುಡುಗನ ಕೈ ಹಿಡಿಯಲಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನದಲ್ಲಿ ಪೊಲೀಸ್ ಅಧಿಕಾರಿ ಆಗಿಯೂ ಕೆಲಸ ಮಾಡುತ್ತಿರುವ ನಟ ಡೊಡಿ ಖಾನ್ ಜೊತೆ ಮದುವೆ ಆಗುವುದಾಗಿ ರಾಖಿ ಸಾವಂತ್ ತಿಳಿಸಿದ್ದಾರೆ. ಡೊಡಿ ಖಾನ್ ಅವರು ತಮಗೆ ಮದುವೆಯ ಪ್ರಸ್ತಾಪ ಮಾಡಿದ್ದಾರೆ ಎಂದು ರಾಖಿ ಸಾವಂತ್​ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದಿಬ್ಬಣ ಕರೆದುಕೊಂಡು ಭಾರತಕ್ಕೆ ಬರಲೇ ಅಥವಾ ದುಬೈಗೆ ಬರಲೇ’ ಎಂದು ಡೊಡಿ ಖಾನ್ ಕೇಳಿದ್ದಾರೆ ಎಂದು ರಾಖಿ ಹೇಳಿದ್ದಾರೆ.

ಈಗಾಗಲೇ ಅವರಿಗೆ ಎರಡು ಮದುವೆ ಆಗಿ ಮುರಿದು ಬಿದ್ದಿವೆ. 2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ಮದುವೆ ಆಗಿದ್ದರು. 2022ರಲ್ಲಿ ವಿಚ್ಛೇದನ ಪಡೆದುಕೊಂಡ ಬಳಿಕ ಮೈಸೂರು ಮೂಲದ ಆದಿಲ್ ಖಾನ್​ ಜೊತೆ ಮದುವೆ ನೆರವೇರಿತ್ತು. ಅವರೊಂದಿಗಿನ ವಿಚ್ಛೇದನದ ನಂತರ ಇದೀಗ ಮೂರನೇ ವಿವಾಹಕ್ಕೆ ರಾಖೀ ಸಾವಂತ್ ತಯಾರಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed