ಏಷ್ಯನ್ ಗೇಮ್ಸ್‌: ಶತಕ ಪದಕ ಗೆದ್ದ ಭಾರತೀಯ ಆಟಗಾರರಿಗೆ ಪ್ರಧಾನಿ ಅಭಿನಂದನೆ

narendra modi

ದೆಹಲಿ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ ಪಂದ್ಯದಲ್ಲಿ ಭಾರತ 100 ಪದಕಗಳ ಗಡಿಯನ್ನು ತಲುಪಿದೆ. ಫೈನಲ್’ನಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆ ವಿರುದ್ಧ 14-9 ಅಂತರದಲ್ಲಿ ಮುನ್ನಡೆ ಸಾಧಿಸಿ ಚಿನ್ನದ ಪದಕ ಗಳಿಸುವ ಮೂಲಕ ಚಿನ್ನದ ಬೇಟೆಯಲ್ಲಿ ಭಾರತವನ್ನು ಐತಿಹಾಸಿಕ ದಾಖಲೆಯತ್ತ ಕೊಂಡೊಯ್ದಿದೆ.

ಏಷ್ಯನ್ ಗೇಮ್ಸ್‌’ನಲ್ಲಿ ಶತಕ ಪದಕ ಗೆದ್ದ ಭಾರತೀಯ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ ಎಂದಿರುವ ಪ್ರಧಾನಿ ಮೋದಿ, ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

You may have missed