ರಾಮಾಚಾರಿ ಯಶ್ ನಿಶ್ಚಿತಾರ್ಥ ಸಮಾರಂಭದ ಹಿನ್ನೆಲೆ ಗೊತ್ತಾ?
ರಾಕ್ ಸ್ಟಾರ್ ಯಶ್ ಮತ್ತು ಮೊಗ್ಗಿನ ಮನಸ್ಸಿನ ಚೆಲುವೆ ರಾಧಿಕಾ ಪಂಡಿತ್ ವಿವಾಹ ನಿಶ್ಚಿತಾರ್ಥ ಗೋವಾದಲ್ಲಿ ಅದ್ದೂರಿಯಾಗಿ ನೆರವೆರಿತು. ಈ ಸಮಾರಂಭ ಹತ್ತು ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು. ಕಿರುತೆರೆಯಲ್ಲಿ ನಂಟಾಗಿ ಹಿರಿತೆರೆಯಲ್ಲಿ ಬಲವಾಗಿ ಬೇರೂರಿದ ಮಂಡ್ಯ ಹುಡುಗ ರಾಕ್ ಸ್ಟಾರ್ ಯಶ್ , ಮೊಗ್ಗಿನ ಮನಸ್ಸಿನ ಚೆಲುವೆ, ಕಡಲೆ ಕಿನಾರೆ ಬೆಡಗಿ ರಾಧಿಕಾ ಪಂಡಿತ್ ಅವರ ವಿವಾಹ ನಿಶ್ಚಿತಾರ್ಥ ಸ್ಯಾಂಡಲ್ ವುಡ್ ಗೆ ಸಂಭ್ರಮದ ದಿನಕ್ಕೆ ಸಾಕ್ಷಿಯಾಯಿತು.
- ಗೋವಾದ ವಿವಾಂತ ಹೊಟೇಲ್ ನಲ್ಲಿ ನಡೆದ ಈ ಅದ್ಧೂರಿ ಸಮಾರಂಭಕ್ಕೆ ಗೋಕರ್ಣ ಮೂಲದ ರವಿಶಂಕರರದ್ದು ಪೌರೋಹಿತ್ಯ. ಸಮಾರಂಭಕ್ಕೆ ಕರಾವಳಿ ಸಂಪ್ರದಾಯದ ಥಳುಕು.
- ಸಿಂಡ್ರೆಲ್ ಖ್ಯಾತಿಯ ರಾಧಿಕಾ ಪಂಡಿತ್ ನೀಲಿ ಸಿಂಡ್ರೆಲ್ಲಾ ಡ್ರೆಸ್ ನಲ್ಲಿ ರಾಧಿಕಾ ಪಂಡಿತ್ ಕಂಗೊಳಿಸಿದರೆ, ಕಪ್ಪು ಕುರ್ತಾದಲ್ಲಿ ಯಶ್ ಮಿಂಚಿದರು.
- ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿಯೇ ಗೋವಾದ ಹೊಟೇಲ್ ನಲ್ಲಿ 4 ಲಕ್ಷ ಬಿಳಿ ಬಣ್ಣದ ಗುಲಾಬಿ ಹೂಗಳಿಂದ ನಿಶ್ಚಿತಾರ್ಥ ವೇದಿಕೆ, ಅದ್ಧೂರಿ ಸೆಟ್ ನ ಸಿಂಗಾರ.
- ಮುಂಬೈ ಮೂಲದ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಯಿಂದ ಇಡೀ ಸಮಾರಂಭದ ಉಸ್ತುವಾರಿ.
ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್, ರೆಬಲ್ ಸ್ಟಾರ್ ಅಂಬರೀಶ, ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್, ಚಿಕ್ಕಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆ.ಮಂಜು, ಯೋಗರಾಜ್ ಭಟ್, ಖ್ಯಾತ ನಟ-ನಟಿಯರ ಸಮಾಗಮ. - ರಾಧಿಕಾ ಮತ್ತು ಯಶ್ ನ್ ಡ್ರೆಸ್ ಡಿಸೈನರ್ ಯಾರು ಗೋತ್ತಾ? ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಪತ್ನಿ ಸಾನಿಯಾ ಸರ್ದಾರಿಯಾ..